ಆರೋಗ್ಯಕ್ಕೂ ಉತ್ತಮ ಹಲಸಿನ ಬೀಜದ ಚಟ್ನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಬೇಕಾಗುವ ಸಾಮಗ್ರಿ:

ಬೇಯಿಸಿದ ಹಲಸಿನ ಬೀಜ -20
ತೆಂಗಿನ ತುರಿ-1ಕಪ್
ಒಣ ಮೆಣಸಿನ ಕಾಯಿ-6
ಉಪ್ಪು ರುಚಿಗೆ ತಕ್ಕಷ್ಟು
ಇಂಗು
ಈರುಳ್ಳಿ ಒಂದು

ಮಾಡುವ ವಿಧಾನ:

ಬೇಯಿಸಿದ ಹಲಸಿನ ಬೀಜವನ್ನು ಚೆನ್ನಾಗಿ ಹಿಚುಕಿ ಪುಡಿಮಾಡಿಕೊಳ್ಳಿ. ತೆಂಗಿನಕಾಯಿ ತುರಿ,ಮೆಣಸು,ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ಹಿಚುಕಿ ಪುಡಿಮಾಡಿದ ಹಲಸಿನ ಬೀಜವನ್ನು ಸೇರಿಸಿ ಕಲಸಿರಿ. ಸಣ್ಣಗೆ ಹೆಚ್ಚಿದ ನೀರುಳ್ಳಿಯನ್ನು ಸೇರಿಸಿ. ಇಂಗು, ಕರಿಬೇವಿನ ಒಗ್ಗರಣೆ ನೀಡಿ. ಊಟಕ್ಕೂ ಸೈ…ಆರೋಗ್ಯಕ್ಕೂ ಜೈ..!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!