Wednesday, November 30, 2022

Latest Posts

200 ಕೋಟಿ ರೂ. ಫ್ರಾಡ್‌ ಕೇಸ್:‌ ಜಾಕ್ವೆಲಿನ್ ಫರ್ನಾಂಡಿಸ್‌ ಗೆ​ ಮಧ್ಯಂತರ ಜಾಮೀನು ವಿಸ್ತರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
200 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವರ್ಗಾವಣೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಜಾಕ್ವೆಲಿನ್​ ಫೆರ್ನಾಂಡಿಸ್‌ ಗೆ ದೆಹಲಿ ನ್ಯಾಯಾಲಯವು ನಟಿಗೆ ನೀಡಿದ್ದ ತಾತ್ಕಾಲಿಕ ಜಾಮೀನನ್ನು ಶುಕ್ರವಾರ ವಿಸ್ತರಿಸಿದೆ.
200 ಕೋಟಿ ರೂ.ಗಳ ಶಂಕಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜಾಮೀನು ಕೋರಿ ಸಲ್ಲಿಸಿರುವ ಕಾಯ್ದಿರಿಸಿದ ವಿಷಯದ ಕುರಿತು ನಿರ್ಧಾರ ಕೈಗೊಳ್ಳುವುದನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶುಕ್ರವಾರ ಮುಂದೂಡಿದೆ. ಆದಾಗ್ಯೂ, ಜಾಕ್ವೆಲಿನ್‌ಗೆ ನೀಡಲಾದ ತಾತ್ಕಾಲಿಕ ಜಾಮೀನನ್ನು ನ್ಯಾಯಾಲಯವು ನವೆಂಬರ್ 15 ಮಂಗಳವಾರದವರೆಗೆ ವಿಸ್ತರಿಸಿದೆ.
ಗುರುವಾರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿತ್ತು.
ಜಾಕ್ವೆಲಿನ್ ಫರ್ನಾಂಡಿಸ್ ಅವರು ಜಾಮೀನು ಕೋರಿ ಸಲ್ಲಿಸಿದ ಮನವಿಯನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಲಾಯಿತು, ಆದರೆ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರು ನಿರ್ಧಾರವನ್ನು ಮುಂದೂಡಿದರು. ಮಂಗಳವಾರ ಸಂಜೆ 4 ಗಂಟೆಗೆ ನ್ಯಾಯಾಲಯ ಆದೇಶ ಹೊರಡಿಸುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!