CINE| ಹಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರಾ ಟಾಲಿವುಡ್ ನಟ ಜಗ್ಗು ಭಾಯ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿರಿಯ ನಾಯಕ ನಟ ಜಗಪತಿ ಬಾಬು ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಟಾಲಿವುಡ್‌ನಲ್ಲಿ ಕ್ರೇಜಿ ಪಾತ್ರಗಳು, ವಿಲನ್ ಪಾತ್ರಗಳಲ್ಲದೇ ಕ್ಯಾರೆಕ್ಟರ್ ರೋಲ್ ನಲ್ಲೂ ಮಿಂಚುತ್ತಿದ್ದಾರೆ. ಫ್ಯಾಮಿಲಿ ಸ್ಟಾರ್ ಆಗಿ ಅಭಿಮಾನಿಗಳನ್ನು ಗಳಿಸಿದ್ದ ಜಗಪತಿ ಬಾಬು ಈಗ ಬಹುಮುಖ ನಟ. ಅಭಿಮಾನಿಗಳು ಜಗಪತಿ ಬಾಬು ಅವರನ್ನು ಪ್ರೀತಿಯಿಂದ ಜಗ್ಗು ಭಾಯ್ ಎಂದು ಕರೆಯುತ್ತಾರೆ.

ಜಗ್ಗೂ ಭಾಯ್ ತೆಲುಗಿನಲ್ಲಷ್ಟೇ ಅಲ್ಲ.. ಹಿಂದಿ, ಮಲಯಾಳಂ, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ಅವರ ಅಭಿನಯಕ್ಕೆ ಫಿದಾ ಆಗಿರುವ ಹಾಲಿವುಡ್ ಮೇಕರ್ ಗಳು ಅಲ್ಲಿ ನಟಿಸುವಂತೆ ಕೇಳುತ್ತಿರುವುದು ಗೊತ್ತೇ ಇದೆ. ಈ ಬಗ್ಗೆ ಜಗಪತಿ ಬಾಬು ಅಧಿಕೃತವಾಗಿ ಘೋಷಿಸಿದ್ದು, ಟ್ವೀಟ್ ಮೂಲಕ ಅಭಿಮಾನಿಗಳ ಸಲಹೆ ಕೇಳಿದ್ದಾರೆ. ʻಹಾಲಿವುಡ್ ನನ್ನನ್ನು ಕರೆಯುತ್ತಿದೆ, ನೀವು ಏನಂತೀರಿʼ ಎಂದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿದವರೆಲ್ಲಾ ಕೂಡ ಹಾಲಿವುಡ್ ಎಂಟ್ರಿ ಎಂದು ಅಚ್ಚರಿ ಹಾಗೂ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲ ಅಭಿಮಾನಿಗಳು ಹಾಲಿವುಡ್ ಎಂಟ್ರಿಗೆ ಅರ್ಹರು ಅಂತಲೂ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಹಾಲಿವುಡ್ ಗೆ ಹೋಗಿ ಬನ್ನಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!