ಹೊಸದಿಗಂತ ವರದಿ ಕಲಬುರಗಿ:
ಶನಿವಾರ ಮತ್ತು ಭಾನುವಾರ ರಾಜ್ಯಾದ್ಯಂತ ಕೆಇಎ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಪರೀಕ್ಷಾ ಮೇಲ್ವಿಚಾರಕರು ಮಹಿಳಾ ಅಭ್ಯರ್ಥಿಯನ್ನು ವಾಪಸ್ ಕಳಿಸಿರುವ ಘಟನೆ ನಡೆದಿದೆ.
ನಗರದ ಆರಾಧನಾ ಪಿಯು ಕಾಲೇಜಿನಲ್ಲಿ ಪರೀಕ್ಷೆ ಬರೆಯಲೆಂದು ಬಂದ ಶಹಾಪೂರ ಮೂಲದ ಇಂದಿರಾ ಎಂಬ ಮಹಿಳಾ ಅಭ್ಯರ್ಥಿಯನ್ನು ವಾಪಸ್ ಕಳುಹಿಸಲಾಯಿತು. ತಡವಾಗಿ ಬಂದ ಕಾರಣಕ್ಕೆ ಪರೀಕ್ಷಾ ಮೇಲ್ವಿಚಾರಕರು ಪರೀಕ್ಷೆಗೆ ಗೈರು ಎಂದು ನಮೂದಿಸಲಾದ ಹಿನ್ನೆಲೆಯಲ್ಲಿ, ಪೋಲಿಸರು ಮಹಿಳಾ ಅಭ್ಯರ್ಥಿಯನ್ನು ವಾಪಸ್ ಕಳಿಸಿದ್ದಾರೆ.
ದೂರದಿಂದ ಬಂದಿರುವ ಕಾರಣಕ್ಕೆ ನಮಗೆ ಪರೀಕ್ಷಾ ಕೇಂದ್ರದ ಸ್ಥಳ ಹುಡುಕವಲ್ಲಿ ವಿಳಂಬವಾಗಿದೆ ಸರ್, ದಯವಿಟ್ಟು ಒಳಗೆ ಬಿಡಿ ಪ್ಲೀಜ್ ಸರ್ ಎಂದು ಇಂದಿರಾ ಮೇಲ್ವಿಚಾರಕರು ಮತ್ತು ಪೋಲಿಸರಲ್ಲಿ ಕೇಳಿಕೊಂಡರು ಪ್ರವೇಶ ಕೊಡಲಿಲ್ಲ. ಪರೀಕ್ಷಾ ನಿಯಮಗಳು ಚಾಚು ತಪ್ಪದೆ ಪಾಲನೆ ಮಾಡಬೇಕಮ್ಮಾ ಎಂದು ಹೇಳಿ ಕಳಿಸಿದರು.