ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿ ತಾರೆಯರ ನಡೆಯನ್ನು ಇಡೀ ಜಗತ್ತು ಹಿಂಬಾಲಿಸುತ್ತೆ. ಅವರ ನಡೆ, ನುಡಿಗಳನ್ನು ಜನರು ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಾರೆ. ಇದನ್ನೇ ಬಲವಾಗಿರಿಸಿ ಹಲವು ಸಿನಿತಾರೆಯರು ಜನರಿಗೆ ಮಾದರಿಯಾಗಿದ್ದಾರೆ.
ಅಂತಹ ಸ್ಫೂರ್ತಿದಾಯಕ ವ್ಯಕ್ತಿಗಳ ಸಾಲಿನಲ್ಲಿ ನಿಲ್ಲುತ್ತಾರೆ ಟಾಲಿವುಡ್ ನಟ ಜಗಪತಿ ಬಾಬು. 60ನೇ ಹುಟ್ಟುಹಬ್ಬದ ಪ್ರಯುಕ್ತ ಅವರು ತಮ್ಮ ಅಂಗಾಂಗ ದಾನ ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ತಮ್ಮ ಜನ್ಮದಿನದಂದು ಉತ್ತಮ ಕೆಲಸ ಮಾಡಬೇಕೆಂದು ಹಾಗೂ ಹಲವರಿಗೆ ಸ್ಫೂರ್ತಿಯಾಗಬೇಕೆಂಬ ಉದ್ದೇಶದಿಂದ ಈ ನಿರ್ಧಾರ ಮಾಡಿದ್ದೇನೆ. ನಮ್ಮ ಮರಣದ ನಂತರ ನಮ್ಮ ಹಲವು ಅಂಗಾಂಗಗಳನ್ನು ಕಸಿ ಮಾಡಿದ ಅವುಗಳಿಗೆ ಮರು ಜನ್ಮ ನೀಡುತ್ತಾರೆ. ನನ್ನೆಲ್ಲಾ ಅಭಿಮಾನಿಗಳು ಈ ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.