ಸಖತ್ ಸದ್ದು ಮಾಡುತ್ತಿದ್ದಾನೆ ‘ಜೈಲರ್’: ಸಿನಿಮಾ ಸಕ್ಸಸ್ ಬೆನ್ನಲ್ಲೇ ಬದರೀನಾಥ್ ನತ್ತ ತಲೈವಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರ ಜೈಲರ್ ಸಿನಿಮಾ ಸಖತ್ ಸದ್ದು ಮಾಡುತ್ತಿದ್ದು, ಇದರ ಬೆನ್ನಲ್ಲೇ ತಲೈವಾ ಬದರೀನಾಥ್ (Badrinath) ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಜೈಲರ್ ಸಿನಿಮಾ ಆಗಸ್ಟ್ 10ಕ್ಕೆ ರಿಲೀಸ್ ಆಗಿ ೨00 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಉತ್ತರಾಖಂಡದ ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬಳಿಕ ಅಭಿಮಾನಿಗಳ ಜೊತೆ ತಲೈವಾ ಸಂವಹನ ನಡೆಸಿದ್ದರು. ಜೈಲರ್ (Jailer) ಸಿನಿಮಾ ರಿಲೀಸ್ ಸಮಯದಲ್ಲೇ ತಲೈವಾ ಪ್ರವಾಸದಲ್ಲಿದ್ದರು. ಬಳಿಕ ಹಿಮಾಲಯಕ್ಕೆ ಭೇಟಿ ನೀಡಿದ್ದರು. ಇದೀಗ ಬದರೀನಾಥ್ ದೇವಾಲಯಕ್ಕೆ ತಲೈವಾ ಭೇಟಿ ನೀಡಿದ್ದಾರೆ.

ತಲೈವಾ ಸಿನಿಮಾದಲ್ಲಿ ಶಿವಣ್ಣ (Shivarajkumar), ಮೋಹನ್ ಲಾಲ್ (Mohanlal), ಜಾಕಿ ಶ್ರಾಫ್, ಸುನೀಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!