VIRAL VIDEO| ವಿಶ್ವದ ಅತ್ಯಂತ ಪುಟ್ಟ ಚಮಚ ನೋಡಿದ್ದೀರಾ? ಇಲ್ಲಿದೆ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನದ ಯುವಕನೊಬ್ಬ ಮರದಿಂದ ವಿಶ್ವದ ಅತ್ಯಂತ ಚಿಕ್ಕ ಚಮಚ ತಯಾರಿಸಿ ಗಿನ್ನಿಸ್ ದಾಖಲೆ ಬರೆದಿದ್ದಾನೆ. ಚಮಚದ ಉದ್ದ 2 ಮಿಲಿಮೀಟರ್. ಯುವಕ ಅದನ್ನು ಬೆರಳಿನ ಉಗುರಿಗಿಂತಲೂ ಚಿಕ್ಕದಾಗಿ ಮಾಡಿರುವ ವಿಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಈ ಹಿಂದೆ ತೆಲಂಗಾಣದ ಗೌರಿ ಶಂಕರ್ ಎಂಬುವವರ ಹೆಸರಿನಲ್ಲಿ ವಿಶ್ವದ ಅತ್ಯಂತ ಚಿಕ್ಕ ಮರದ ಚಮಚ (4.5 ಮಿಮೀ ಉದ್ದ) ತಯಾರಿಸಲಾಗಿತ್ತು. ಮೇ 2021 ರಲ್ಲಿ, ಗೌರಿ ಶಂಕರ್ ಗಿನ್ನಿಸ್ ವಿಶ್ವ ದಾಖಲೆಯನ್ನು ಸಾಧಿಸಿದರು. ಅವರ ದಾಖಲೆಯನ್ನು ಇದೀಗ ರಾಜಸ್ಥಾನದ ಯುವಕನೊಬ್ಬ ಮುರಿದಿದ್ದಾನೆ. ಇದರ ವಿವರಗಳನ್ನು ಗಿನ್ನೆಸ್ ಬುಕ್ ನಲ್ಲಿ ನೀಡಲಾಗಿದೆ.

ರಾಜಸ್ಥಾನದ ರಾಜಧಾನಿ ಜೈಪುರದ ಕಲಾವಿದ ನವರಥನ್ ಪ್ರಜಾಪತಿ ಅವರಿಗೆ ಸಣ್ಣಪುಟ್ಟ ವಸ್ತುಗಳನ್ನು ತಯಾರಿಸುವ ಅಭ್ಯಾಸವಿದೆ. ಈ ಹಿಂದೆ ಚಿಕ್ಕ ಚಿಕ್ಕ ವಸ್ತುಗಳನ್ನು ತಯಾರಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇತ್ತೀಚೆಗೆ, ಅವರು ವಿಶ್ವದ ಅತ್ಯಂತ ಚಿಕ್ಕ ಚಮಚವನ್ನು ತಯಾರಿಸಿ ಗಿನ್ನಿಸ್ ದಾಖಲೆಯನ್ನು ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!