ನ್ಯೂಜಿಲೆಂಡ್ ವಿದೇಶಾಂಗ ಸಚಿವೆಯನ್ನು ಭೇಟಿಯಾದ ಜೈಶಂಕರ್:‌ ವಿದ್ಯಾರ್ಥಿ ವೀಸಾ ಕುರಿತು ಚರ್ಚೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ನ್ಯೂಜಿಲೆಂಡ್ ವಿದೇಶಾಂಗ ಸಚಿವೆ ನಾನಿಯಾ ಮಹುತಾ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು ಮತ್ತು ದೇಶವು ವಿಧಿಸಿರುವ ಕೋವಿಡ್ -19 ಕ್ರಮಗಳಿಂದಾಗಿ ಭಾರತೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ವೀಸಾ ಸಮಸ್ಯೆಗಳ ಬಗ್ಗೆ ಚರ್ಚುಸಿದರು.

ನ್ಯೂಜಿಲೆಂಡ್‌ನಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳ ತ್ವರಿತ ವೀಸಾ ಪ್ರಕ್ರಿಯೆ ನಡೆಸುವಂತೆ ಸಚಿವ ಜೈಶಂಕರ್ ನಾನಿಯಾ ಮಹುತಾ ಅವರಲ್ಲಿ ವಿನಂತಿಸಿದರು. ಕೋವಿಡ್ ಕ್ರಮಗಳಿಂದ ಪ್ರಭಾವಿತವಾಗಿರುವ ಭಾರತೀಯ ವಿದ್ಯಾರ್ಥಿಗಳ ವೀಸಾ ಸಮಸ್ಯೆಯನ್ನು ಎದುರಿಸುತ್ತಿದ್ದು, ನ್ಯೂಜಿಲೆಂಡ್‌ನಲ್ಲಿ ಅಧ್ಯಯನ ಮಾಡಲು ಬಯಸುವವರಿಗೆ ತ್ವರಿತ ವೀಸಾ ಪ್ರಕ್ರಿಯೆ ನಡೆಸುವಂತೆ ಒತ್ತಾಯಿಸಿರುವುದಾಗಿ ಸಚಿವ ಜೈಶಂಕರ್ ಟ್ವೀಟ್‌ ಮಾಡಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ವ್ಯಾಪಾರ, ಶಿಕ್ಷಣ ಕೃಷಿ ಸೇರಿದಂತೆ ಇತರೆ ವ್ಯವಹಾರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿವೆ. ಹವಾಮಾನ, ಸಾಂಕ್ರಾಮಿಕ ರೋಗಗಳು ಸೇರಿದಂತೆ ಜಾಗತಿಕ ಸಮಸ್ಯೆಗಳ ಕುರಿತಾಗಿಯೂ ಎರಡೂ ದೇಶಗಳು ಒಟ್ಟಿಗೆ ಸಹಕರಿಸಬಹುದು ಎಂಬ ಮಾತನ್ನು ಜೈಶಂಕರ್ ಹೇಳಿದರು.

ಇಂಡೋ-ಪೆಸಿಫಿಕ್ ಮತ್ತು ಉಕ್ರೇನ್ ಸಂಘರ್ಷದಂತಹ ಅಂತರಾಷ್ಟ್ರೀಯ ಕಾಳಜಿಗಳ ಬಗ್ಗೆ ಅಭಿಪ್ರಾಯ ವಿನಿಮಯವನ್ನು ವಿದೇಶಾಂಗ ವ್ಯವಹಾರಗಳ ಸಚಿವರು ಶ್ಲಾಘಿಸಿದರು. ವಿಶ್ವಸಂಸ್ಥೆ ಮತ್ತು ಕಾಮನ್‌ವೆಲ್ತ್ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ನ್ಯೂಜಿಲೆಂಡ್‌ನೊಂದಿಗಿನ ತನ್ನ ಸಂಬಂಧವನ್ನು ಭಾರತ ಗೌರವಿಸುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!