April 12, 2026
Sunday, April 12, 2026
spot_img

ರಷ್ಯಾ ವಿದೇಶಾಂಗ ಸಚಿವರಿಗೆ ಜೈಶಂಕರ್ ದೂರವಾಣಿ ಕರೆ: ತೈಲ ಖರೀದಿಯ ಕುರಿತು ನಡೆಯಿತೇ ಮಾತುಕತೆ?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮಧ್ಯ ಪ್ರಾಚ್ಯದಲ್ಲಿನ ಸಂಘರ್ಷದಿಂದ ಇಂಧನ ಪೂರೈಕೆಯಲ್ಲಿ ಅಡೆತಡೆಗಳು ಉಂಟಾಗಿದ್ದು, ಇದರ ನಡುವೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಬುಧವಾರ ರಷ್ಯಾದ ಸಹವರ್ತಿ (ರಷ್ಯಾ ವಿದೇಶಾಂಗ ಸಚಿವ) ಸೆರ್ಗೆಯ್ ಲಾವ್ರೊವ್ ಮತ್ತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿರ್ಬಂಧಿಸಿದ ನಂತರ ಜಾಗತಿಕ ತೈಲ ಮತ್ತು ಅನಿಲ ಬೆಲೆಗಳು ಏರಿಕೆಯಾಗಿವೆ.

ಇದರ ನಡುವೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಉತ್ತಮ ದೂರವಾಣಿ ಸಂಭಾಷಣೆ ನಡೆದಿದೆ. ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಸಂಬಂಧಿತ ರಾಜತಾಂತ್ರಿಕ ಪ್ರಯತ್ನಗಳ ಕುರಿತು ನಮ್ಮ ಮೌಲ್ಯಮಾಪನಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ದ್ವಿಪಕ್ಷೀಯ ಸಹಕಾರ ಕಾರ್ಯಸೂಚಿಯನ್ನು ಸಹ ಪರಿಶೀಲಿಸಿದ್ದೇವೆ ಎಂದು ಜೈಶಂಕರ್ ಹೇಳಿದ್ದಾರೆ, ಆದರೆ ಈ ವೇಳೆ ಭಾರತದಿಂದ ರಷ್ಯಾದ ಕಚ್ಚಾ ತೈಲ ಖರೀದಿ ಮಾತುಕತೆ ನಡೆದಿರಬಹುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !