ಬಾಕ್ಸ್ ಆಫೀಸ್ ನಲ್ಲಿ ಧೂಳು ಎಬ್ಬಿಸಿದ ಜೇಮ್ಸ್’ ಈಗ ಓಟಿಟಿಗೆ ಲಗ್ಗೆ: ಎಲ್ಲಿ? ಯಾವಾಗ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್

ನಟ ಪುನೀತ್ ರಾಜ್‌ಕುಮಾರ್ ಅಭಿನಯದ ‘ಜೇಮ್ಸ್’ ಸಿನಿಮಾ ಈಗಾಗಲೇ ತೆರೆ ಮೇಲೆ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ತಮ್ಮ ಪ್ರೀತಿಯ ಅಪ್ಪುವೀಣೆ ನೋಡು ನೋಡಲು ಬರುತ್ತಿದ್ದಾರೆ.
ಈ ಸಿನಿಮಾ ಪುನೀತ್ ಅಭಿನಯದ ಕೊನೆಯ ಸಿನಿಮಾವಾಗಿದ್ದು, ಅಭಿಮಾನಿಗಳು ವಿಶೇಷವಾಗಿ ಸ್ವೀಕರಿಸಿದ್ದಾರೆ.
ಇದೀಗ ಇನ್ನೊಂದು ಸಿಹಿ ಸುದ್ದಿ ಏನೆಂದರೆ ಮಾರ್ಚ್‌ 17ರಂದು ವಿಶ್ವಾದ್ಯಂತ ತೆರೆ ಕಂಡ ಈ ಸಿನಿಮಾ, ಓಟಿಟಿಗೆ ಬರಲು ಸಿದ್ಧವಾಗಿದೆ.
ಹೌದು, ‘ಜೇಮ್ಸ್’ ಸಿನಿಮಾದ ಓಟಿಟಿ ಸ್ಟ್ರೀಮಿಂಗ್ ಡೇಟ್ ಅನೌನ್ಸ್ ಆಗಿದೆ. ಚಿತ್ರದ ಓಟಿಟಿ ಹಕ್ಕುಗಳು ಸೋನಿ ಲೈವ್‌ಗೆ (Sony Live) ಸೇಲ್ ಆಗಿದ್ದು, ಏಪ್ರಿಲ್ 14ರಿಂದ ಪ್ರಸಾರ ಆಗಲಿದೆ.
ಇತ್ತ ಓಟಿಟಿ ಲೀಸ್ ಡೇಟ್ ಘೋಷಣೆ ಆಗಿದ್ದರೂ ಕೂಡ ಚಿತ್ರಮಂದಿರದಲ್ಲಿ ‘ಜೇಮ್ಸ್’ ಹವಾ ಮಾತ್ರ ಕಮ್ಮಿ ಆಗಿಲ್ಲ. ಪುನೀತ್ ರಾಜ್‌ಕುಮಾರ್ ಅವರ ‘ಜೇಮ್ಸ್’ ಸಿನಿಮಾ 88 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವ ಸಿನಿಮಾವೂ ಮಾಡದ ಸಾರ್ವಕಾಲಿಕ ದಾಖಲೆ ಬರೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!