ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗರಿಕರ ಸುರಕ್ಷತೆಗಾಗಿ ಹೋರಾಡುತ್ತಿರುವ ನಮ್ಮ ಸೈನಿಕರಿಗೆ ಇನ್ನಷ್ಟು ಹುಮ್ಮಸ್ಸು ನೀಡಲು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ತಿರಂಗಾ ಯಾತ್ರೆ ನಡೆದಿದೆ.
ಸೂಸೈಡ್ ಬಾಂಬರ್ ಆಗಿ ಪಾಕ್‌ಗೆ ಹೋಗ್ತೀನಿ ಎಂದು ಹೇಳಿದ್ದ ಜಮೀರ್ ಅಹಮದ್ ಈ ತಿರಂಗಾ ಯಾತ್ರೆಗೂ ಬಂದಿಲ್ಲ ಅನ್ನೋದು ವಿಪರ್ಯಾಸ.
ಜಮೀರ್ ಅಹಮದ್ ಅಲ್ಲದೇ ಸಚಿವ ರಹೀಂ ಖಾನ್ ಗೂಡ ಗೈರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಸೇರಿ ಬಹುತೇಕ ಕಾಂಗ್ರೆಸ್ ನ ಎಲ್ಲರೂ ಭಾಗವಹಿಸಿದ್ದಾರೆ. ಜಮೀರ್ ಅಹಮದ್ ಗೈರಿಗೆ ಈಗ ಕಾಂಗ್ರೆಸ್‌ನಲ್ಲೇ ಅಸಮಾಧಾನ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ನಾನು ಆತ್ಮಾಹುತಿ ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ದಕ್ಕೆ ಹೋಗುತ್ತೇನೆ. ದೇಶಕ್ಕಾಗಿ ನಾನು ಹುತಾತ್ಮನಾಗಲು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಎರಡು ಬಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಇಲ್ಲೇ ಬೆಂಗಲೂರಿನಲ್ಲಿ ಇರುವ ತಿರಂಗಾ ಯಾತ್ರೆಗೇ ಬಂದಿಲ್ಲ ಎಂದು ಜನ ಆಡಿಕೊಂಡಿದ್ದಾರೆ.