August 3, 2026
Monday, August 3, 2026
spot_img

ನಿರಾಸೆ ತಂದ ‘ಜನ ನಾಯಗನ್’: ಬಾಕ್ಸ್ ಆಫೀಸ್‌ನಲ್ಲಿ ಮಂಕಾಯಿತೇ ಕೊನೆಯ ಸಿನಿಮಾದ ಹವಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರರಂಗದ ದಳಪತಿ ವಿಜಯ್ ಅಭಿನಯದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸದಾ ಧೂಳೆಬ್ಬಿಸುತ್ತಿದ್ದವು. ಈ ಹಿಂದೆ ನೆಗೆಟಿವ್ ವಿಮರ್ಶೆಗಳ ನಡುವೆಯೂ ಅವರ ‘ಲಿಯೋ’ ಸಿನಿಮಾ ಬರೋಬ್ಬರಿ ₹623 ಕೋಟಿ ಹಾಗೂ ‘ಗೋಟ್’ ಚಿತ್ರ ₹455 ಕೋಟಿ ಕಲೆಕ್ಷನ್ ಮಾಡಿ ಅಬ್ಬರಿಸಿದ್ದವು. ಆದರೆ, ಅವರ ಕೊನೆಯ ಸಿನಿಮಾ ಎಂದೇ ಬಿಂಬಿತವಾಗಿರುವ ‘ಜನ ನಾಯಗನ್’ ಚಿತ್ರವು ಪ್ರೇಕ್ಷಕರಿಂದ ನಿರೀಕ್ಷಿತ ಮನ್ನಣೆ ಪಡೆಯಲಾಗದೆ ಗಲ್ಲಾಪೆಟ್ಟಿಗೆಯಲ್ಲಿ ಕಷ್ಟಪಡುತ್ತಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

11 ದಿನಗಳ ದೇಶೀಯ ಬಾಕ್ಸ್ ಆಫೀಸ್ ಗಳಿಕೆ

ಚಿತ್ರ ಬಿಡುಗಡೆಯಾಗಿ 11 ದಿನಗಳು ಕಳೆದಿವೆ. ಭಾನುವಾರ ಭಾರತದಾದ್ಯಂತ ಪ್ರದರ್ಶನಗೊಂಡ ಒಟ್ಟು 4,321 ಶೋಗಳಿಂದ ಚಿತ್ರಕ್ಕೆ ದೊರೆತದ್ದು ಕೇವಲ ₹10.70 ಕೋಟಿ ನಿವ್ವಳ ಗಳಿಕೆ ಮಾತ್ರ. ಇದರೊಂದಿಗೆ ದೇಶೀಯ ಮಾರುಕಟ್ಟೆಯಲ್ಲಿ ಚಿತ್ರದ ಒಟ್ಟು ಗ್ರಾಸ್ ಗಳಿಕೆ ₹204.92 ಕೋಟಿಗೆ ಬಂದು ನಿಂತಿದ್ದು, ನೆಟ್ ಕಲೆಕ್ಷನ್ ₹175.60 ಕೋಟಿ ತಲುಪಿದೆ.

ವಿದೇಶದಲ್ಲೂ ಮಂಕಾದ ‘ಜನ ನಾಯಗನ್’ ಕ್ರೇಜ್

ಅಂತರರಾಷ್ಟ್ರೀಯ ಮಟ್ಟದಲ್ಲೂ ಈ ಚಿತ್ರದ ಹವಾ ತಣ್ಣಗಾಗಿದ್ದು, 11ನೇ ದಿನ ವಿದೇಶಿ ಮಾರುಕಟ್ಟೆಯಿಂದ ಗಳಿಸಿದ್ದು ಕೇವಲ ₹3.00 ಕೋಟಿ ಮಾತ್ರ. ಪರಿಣಾಮವಾಗಿ, ಓವರ್‌ಸೀಸ್ ಒಟ್ಟು ಗ್ರಾಸ್ ಕಲೆಕ್ಷನ್ ₹91.00 ಕೋಟಿಗೆ ತಲುಪಿದೆ. ಪ್ರಸ್ತುತ ಭಾರತ ಮತ್ತು ವಿದೇಶಿ ಗಳಿಕೆಯನ್ನು ಒಟ್ಟಾಗಿ ಸೇರಿಸಿದರೆ ವಿಶ್ವಾದ್ಯಂತ ‘ಜನ ನಾಯಗನ್’ ಚಿತ್ರ ಒಟ್ಟಾರೆಯಾಗಿ ₹295.92 ಕೋಟಿ ಗಳಿಸಲಷ್ಟೇ ಶಕ್ತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !