April 13, 2026
Monday, April 13, 2026
spot_img

‘ಜನ ನಾಯಗನ್’ ಆಯ್ತು ಈಗ ‘ಕೆಡಿ’ಗೂ ಸೆನ್ಸಾರ್ ಪ್ರಾಬ್ಲಮ್: ಬಿಡುಗಡೆಗೂ ಮುನ್ನ ಹೊಸ ಸಮಸ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ಸಿನಿಮಾಗಳಿಗೆ ಒಂದರ ಹಿಂದೆ ಒಂದರಂತೆ ಸೆನ್ಸಾರ್ ತೊಂದರೆ ಎದುರಾಗುತ್ತಿರುವಂತಿದೆ. ವಿಜಯ್ ಅಭಿನಯದ ‘ಜನ ನಾಯಗನ್’ ನಂತರ ಈಗ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ ಸಿನಿಮಾ ಇದೇ ರೀತಿಯ ಹೊಸ ಸಮಸ್ಯೆಗೆ ಸಿಲುಕಿದೆ ಎಂಬ ಮಾಹಿತಿ ಹೊರಬಂದಿದೆ.

ಮೂಲಗಳ ಪ್ರಕಾರ, ಜೋಗಿ ಪ್ರೇಮ್ ನಿರ್ದೇಶನದ ಈ ದೊಡ್ಡ ಬಜೆಟ್ ಚಿತ್ರದ ಪ್ರಾಥಮಿಕ ವೀಕ್ಷಣೆಯನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೇ ಪೂರ್ಣಗೊಳಿಸಿದೆ. ಚಿತ್ರದಲ್ಲಿ ಆಕ್ಷನ್ ಮತ್ತು ರಕ್ತಪಾತದ ದೃಶ್ಯಗಳು ಹೆಚ್ಚಿರುವ ಹಿನ್ನೆಲೆ ‘ಎ’ ಪ್ರಮಾಣಪತ್ರ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಕೆಲವು ಹಾಡುಗಳ ಸಾಹಿತ್ಯದಲ್ಲೂ ಬದಲಾವಣೆ ಸೂಚಿಸಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ:

ಆದರೆ ಅಂತಿಮ ಪ್ರಮಾಣಪತ್ರ ನೀಡುವ ಹಂತದಲ್ಲಿ ಚಿತ್ರವನ್ನು ನೇರವಾಗಿ ರಿವೈಸಿಂಗ್ ಕಮಿಟಿಗೆ ಕಳುಹಿಸಲಾಗಿದೆ ಎಂಬುದು ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವೆಂದರೆ, ಈ ನಿರ್ಧಾರದ ಬಗ್ಗೆ ನಿರ್ಮಾಪಕರಿಗೆ ಅಥವಾ ನಿರ್ದೇಶಕರಿಗೆ ಅಧಿಕೃತ ಮಾಹಿತಿ ನೀಡದೇ ಮುಂದಿನ ಹಂತಕ್ಕೆ ಕಳುಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ರೀತಿಯ ಪ್ರಕ್ರಿಯೆ ಇತ್ತೀಚೆಗೆ ‘ಜನ ನಾಯಗನ್’ ಸಿನಿಮಾಗೂ ನಡೆದಿತ್ತು.

ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಸೆನ್ಸಾರ್ ಪ್ರಮಾಣಪತ್ರ ವಿಳಂಬವಾದರೆ ಚಿತ್ರದ ರಿಲೀಸ್ ಮುಂದೂಡುವ ಸಾಧ್ಯತೆ ಇದೆ. ಈಗಾಗಲೇ ಹಾಡಿನ ಸಾಹಿತ್ಯ ವಿವಾದದಿಂದ ಚಿತ್ರ ಚರ್ಚೆಗೆ ಗ್ರಾಸವಾಗಿದ್ದರೆ, ಇದೀಗ ಸೆನ್ಸಾರ್ ಅಡೆತಡೆ ಹೊಸ ತಲೆನೋವಾಗಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !