ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಮೊದಲ ದಿನವೇ ಅಯೋಧ್ಯೆನಗರಿಯಲ್ಲಿ ಜನ ಸಾಗರವಾಗಿದೆ. ಜನವರಿ 1ರ ಸಂಜೆ 5 ಗಂಟೆಯವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಅಯೋಧ್ಯೆಯತ್ತ ಭೇಟಿ ನೀಡಿ ವಿರಾಜಿತ ಬಾಲಕ ರಾಮನ ದರುಶನ ಪಡೆದಿದ್ದಾರೆ.
ಜನವರಿ 1 ರಂದು ಬೆಳಗ್ಗೆ 7 ಗಂಟೆಯಿಂದ ಶ್ರೀರಾಮ ಲಲ್ಲಾನ ದರುಶನಕ್ಕೆ ಅನುವು ಮಾಡಿಕೊಡಲಾಗಿದೆ. ಒಟ್ಟು 5 ಸರತಿ ಸಾಲುಗಳಲ್ಲಿ ಭಕ್ತರಿಗೆ ದರುಶನ ವ್ಯವಸ್ಥೆ ಮಾಡಲಾಗುತ್ತಿದೆ. 2 ಲಕ್ಷ ಭಕ್ತರು ರಾಮನ ದರುಶನ ಪಡೆದಿದ್ದಾರೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್‌ನ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ.
ಸಂಜೆ 5 ಗಂಟೆಯವರೆಗೆ 2 ಲಕ್ಷ ಭಕ್ತರು ಅಯೋಧ್ಯೆ ರಾಮನ ದರುಶನ ಪಡೆದಿದ್ದಾರೆ. ರಾತ್ರಿ 9 ಗಂಟೆಯವರೆಗೆ ಭಕ್ತರಿಗೆ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಈಗಲೂ ಬಾಲಕ ರಾಮನ ದರುಶನ ಪಡೆದರು.
ಚಳಿಗಾಲ ಮತ್ತು ರಜಾ ಸೀಸನ್ ಆಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ರಾಮ ಟೆಂಪಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.