CINEMA| ತಾರಕ್ ಸಿನಿಮಾದಲ್ಲಿ ಜಾಹ್ನವಿ ಕಪೂರ್ ಸಂಭಾವನೆ ಎಷ್ಟು ಗೊತ್ತಾ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಂಗ್ ಟೈಗರ್ ಎನ್‌ಟಿಆರ್ ಅವರ 30ನೇ ಚಿತ್ರಕ್ಕಾಗಿ ಪ್ರೇಕ್ಷಕರು ಕಾಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಈ ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ಈ ಚಿತ್ರದಲ್ಲಿ ತಾರಕ್‌ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ನಟಿಸಲಿದ್ದಾರೆ ಎಂಬ ಸುದ್ದಿ ಉದ್ಯಮ ವಲಯದಲ್ಲಿ ಹರಿದಾಡುತ್ತಿದೆ.

ಈ ಚಿತ್ರಕ್ಕೆ ನಾಯಕಿಯಾಗಿ ಜಾಹ್ನವಿ ಕಪೂರ್ ಅವರನ್ನು ಚಿತ್ರತಂಡ ಒಪ್ಪಿಕೊಂಡಿದೆಯಂತೆ. ಈ ಚಿತ್ರದಲ್ಲಿ ನಟಿಸಲು ಜಾಹ್ನವಿ 4 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ. ಇದು ಈಕೆಯ ವೃತ್ತಿ ಜೀವನದಲ್ಲಿಯೇ ದೊಡ್ಡ ಸಂಭಾವನೆ ಎನ್ನುತ್ತವೆ ಚಿತ್ರ ಮೂಲಗಳು. ಅದೂ ಅಲ್ಲದೆ ಈ ಚಿತ್ರದಲ್ಲಿ ಇವರ ಪಾತ್ರವೂ ವೈವಿಧ್ಯಮಯವಾಗಿರಲಿದೆಯಂತೆ.

ಈ ಚಿತ್ರದಲ್ಲಿ ತಾರಕ್ ಅವರ ಪಾತ್ರ ಅಲ್ಟಿಮೇಟ್‌ ಇರಲಿದೆ ಎನ್ನುತ್ತಿದೆ ಚಿತ್ರತಂಡ. ಈ ಹಿಂದೆ ತಾರಕ್ ಅಂತಹ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಸದ್ಯದಲ್ಲೇ ಈ ಚಿತ್ರದ ಶೂಟಿಂಗ್ ಆರಂಭಿಸಲು ಚಿತ್ರತಂಡ ಸಜ್ಜಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!