ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಶ್ರೀದೇವಿ ಮಗಳಾದ ಜಾನ್ವಿ ಕಪೂರ್ ತೆಲುಗು ಸಿನಿ ಇಂಡಸ್ಟ್ರಿ ಜೊತೆ ಒಂದೊಳ್ಳೆ ಕನೆಕ್ಷನ್ ಇಟ್ಟುಕೊಂಡಿದ್ದಾರೆ.
ಜ್ಯೂ. ಎನ್‌ಟಿಆರ್ ಜೊತೆ ಜಾನ್ವಿ ದೇವರ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾ ರಿಲೀಸ್ ಆಗಿದ್ದು, ಜಾನ್ವಿ ನೋಡೋಕೆ ಹೋಗಿದ್ದ ಫ್ಯಾನ್ಸ್‌ಗೆ ನಿರಾಸೆಯಾಗಿದೆ.
ಜಾನ್ವಿ ಕಪೂರ್ ಅವರು ‘ದೇವರ’ ಸಿನಿಮಾದ ಮೊದಲಾರ್ಧದಲ್ಲಿ ಬರೋದೇ ಇಲ್ಲ. ದ್ವಿತೀಯಾರ್ಧದದಲ್ಲಿ ಅವರು ಕಾಣಿಸೋದು ಒಂದು ಸಾಂಗ್ ಹಾಗೂ ಎರಡು ದೃಶ್ಯಗಳಲ್ಲಿ ಮಾತ್ರ ಅನ್ನೋದು ಬೇಸರದ ವಿಚಾರ. ಇದು ಅವರ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದೆ.
ಒಂದೆರಡು ಡೈಲಾಗ್ಸ್‌ಗೆ ಮಾತ್ರ ನಟಿಯನ್ನು ಸೀಮಿತ ಮಾಡಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.