ಸಾಮಾಗ್ರಿಗಳು
ಬೆಲ್ಲ
ಸಬ್ಬಕ್ಕಿ
ದ್ರಾಕ್ಷಿ ಗೋಡಂಬಿ
ಏಲಕ್ಕಿ
ಕಾಯಿ
ಬಾದಾಮಿ
ತುಪ್ಪ
ಮಾಡುವ ವಿಧಾನ
ಮೊದಲು ಬಾಣಲೆಗೆ ಒಂದು ಸ್ಪೂನ್ ತುಪ್ಪ ಹಾಕಿ ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟ ಸಬ್ಬಕ್ಕಿಯನ್ನು ಹಾಕಿ ಹುರಿಯಿರಿ
ತಕ್ಷಣ ಬೆಲ್ಲ ಕರಗಿಸಿದ ನೀರನ್ನು ಹಾಕಿ ಮಿಕ್ಸ್ ಮಾಡಿ ಕುದಿಸಿ
ನಂತರ ಮಿಕ್ಸಿಗೆ ಕಾಯಿ, ಗೋಡಂಬಿ, ಬಾದಾಮಿ ಹಾಗೂ ಏಲಕ್ಕಿ ಹಾಕಿ ಮಿಕ್ಸಿ ಮಾಡಿ
ಈ ಮಿಶ್ರಣವನ್ನು ಹಾಕಿ
ನಂತರ ತುಪ್ಪದಲ್ಲಿ ದ್ರಾಕ್ಷಿ ಗೋಡಂಬಿ ಹುರಿದು ಹಾಕಿ
ಬೇಕಿದ್ದಲ್ಲಿ ಹಾಲು ಹಾಕಿ ಬಾಡಿಸಿದ್ರೆ ಪಾಯಸ ರೆಡಿ