ಜಪಾನ್‌ನಲ್ಲಿ ಪ್ರವಾಸಿಗರ ದೋಣಿ ಮುಳುಗಡೆ: 26 ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಜಪಾನಿನ ಹೊಕ್ಕೈಡೊ ದ್ವೀಪದಲ್ಲಿ ಪ್ರವಾಸಿ ದೋಣಿ ನಾಪತ್ತೆಯಾಗಿದೆ ಎಂದು ಆ ದೇಶದ ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ. ದೋಣಿಯಲ್ಲಿದ್ದ 26ಪ್ರವಾಸಿಗರು ನೀರಿನಲ್ಲಿ ಮುಳುಗಿದ್ದಾರೆ ಎಂದು ಜಪಾನಿನ ಕೋಸ್ಟ್ ಗಾರ್ಡ್ ಸ್ಪಷ್ಟಪಡಿಸಿದೆ. ಅದರಲ್ಲಿ ನಾಲ್ವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಈ ಪ್ರದೇಶವು ವಿಶ್ವ ಪರಂಪರೆಯ ತಾಣವೆಂದು ಯುನೆಸ್ಕೋ ಗುರುತಿಸಿದೆ. ಶನಿವಾರ ಮಧ್ಯಾಹ್ನ ಜೋರಾದ ಗಾಳಿಯಿಂದ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮುಳುಗಿದೆ ಎನ್ನಲಾಗುತ್ತಿದೆ.

ಜಪಾನ್ ಕಾಲಮಾನದ ಪ್ರಕಾರ ಶನಿವಾರ ಮಧ್ಯಾಹ್ನ 1.15ರ ಸುಮಾರಿಗೆ ದೋಣಿ ಸಂಪರ್ಕ ಕಳೆದುಕೊಂಡಿದೆ ಎಂದು ಕೋಸ್ಟ್ ಗಾರ್ಡ್ ತಿಳಿಸಿದೆ. ಬೋಟ್ ಪತ್ತೆಗೆ ನಾಲ್ಕು ಹೆಲಿಕಾಪ್ಟರ್‌ಗಳ ಜೊತೆಗೆ ನಾಲ್ಕು ಗಸ್ತು ಬೋಟ್‌ಗಳನ್ನು ನಿಯೋಜಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದುವರೆಗೂ ಯಾರೂ ಪತ್ತೆಯಾಗದಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಹವಾಮಾನ ವೈಪರೀತ್ಯದ ಕಾರಣ ಮೀನುಗಾರಿಕಾ ದೋಣಿಗಳು ಸಹ ವಾಪಸಾದವು.

ಕಾಜು-1ಪ್ರವಾಸಿಗರ ದೊನೀ ಸಂಪರ್ಕ ಕಳೆದುಕೊಂಡಿದೆ. ಮತ್ತೊಂದೆಡೆ, ಲೆಬನಾನ್‌ನಲ್ಲಿ ಒಂದು ದೋಣಿ ಅಪಘಾತಕ್ಕೀಡಾಗಿದೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ 60 ಮಂದಿ ಇದ್ದರು ಎನ್ನಲಾಗಿದೆ. 45 ಮಂದಿಯನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಉಳಿದವರು ಎಲ್ಲಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!