ಜಪಾನ್‌ನಲ್ಲಿ ʼಕುಡುಕರʼ ಸಂಖ್ಯೆ ಹೆಚ್ಚಿಸಲು ಅಭಿಯಾನ: ತಾನೇ ಮುಂದೆ ನಿಂತು ಜನರಿಗೆ ಕುಡಿಸುತ್ತಿದೆ ಸರ್ಕಾರ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೆಲವರು ಖುಷಿಗಾಗಿ ಕುಡಿಯುತ್ತಾರೆ, ಇನ್ನೂ ಕೆಲವರು ಸೀರಿಯಸ್ ಆಗಿ ಕುಡಿಯುತ್ತಾರೆ. ಕೆಲವರಿಗೆ ಕುಡಿಯಲು ಏನಾದರೊಂದು ಕಾರಣ ಇರುತ್ತದೆ. ಇನ್ನು ಕೆಲವರ ಬದುಕಿರಲು ಕಾರಣವೇ ಕುಡಿತವಾಗಿರುತ್ತದೆ! ಅದೇನೇ ಇರಲಿ ಜನರು ಮದ್ಯಪಾನದಿಂದ ದೂರವಾಗುವುದನ್ನು ಸಾಮಾನ್ಯವಾಗಿ ಸಕಾರಾತ್ಮಕ ಪ್ರವೃತ್ತಿ ಎಂದು ಸ್ವಾಗತಿಸಲಾಗುತ್ತದೆ. ಕುಡುಕರನ್ನು ಯಾರೂ ಸಹ ಬೆಂಬಲಿಸುವುದಿಲ್ಲ. ಆದರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಸರ್ಕಾರವೊಂದು ತಾನೇ ಮುಂದೆ ಮುಂದೆ ನಿಂತು ಜನರಿಗೆ ಕುಡಿಸುತ್ತಿದೆ. ಯುವಜನರು ಮದ್ಯ ಸೇವಿಸುವ ಪ್ರಮಾಣವನ್ನು ಜಾಸ್ತಿಮಾಡುವಂತೆ ಪ್ರೇರೇಪಿಸಲು ಅಭಿಯಾನವನ್ನೂ ಸಹ ಪ್ರಾರಂಭಿಸಿದೆ!.
ಇಂತಹದ್ದೊಂದು ಸಾಹಸಕ್ಕೆ ಮುಂದಾಗಿರುವುದು ಜಪಾನ್‌ ಸರ್ಕಾರ. ಕೊರೋನಾ ಬಳಿಕ ಜಪಾನ್‌ ಆರ್ಥಿಕತೆಗೆ ಪೆಟ್ಟುಬಿದ್ದಿದೆ. ಜನರು ಮದ್ಯ ಸೇವಿಸಲು ನಿರಾಸಕ್ತಿ ತೋರಿಸುತ್ತಿರುವುದು ಇದಕ್ಕೆ ಕಾರಣಗಳಲ್ಲೊಂದು. ಮದ್ಯದ ತೆರಿಗೆ ಆದಾಯವು ತೀರಾ ಕುಸಿಯುತ್ತಿರುವುದರಿಂದ ಬೊಕ್ಕಸ ಖಾಲಿಯಾಗುತ್ತಿರುವುದು ಜಪಾನ್‌ ಸರ್ಕಾರವನ್ನು ಕಂಗಾಲಾಗಿಸಿದೆ. ಇದಕ್ಕಾಗಿ ಜಪಾನ್‌ ಸರ್ಕಾರ ಕುಡುಕರನ್ನು ಪ್ರೋತ್ಸಾಹಿಸಲು ಪ್ಲಾನ್‌ ರೂಪಿಸಿದೆ.
ದೇಶದ ಆರೋಗ್ಯ ಸಚಿವಾಲಯದ ಪ್ರಕಾರ ಜಪಾನ್‌ನ ಆಲ್ಕೊಹಾಲ್ ಸೇವನೆಯು ಕೊರೋನಾ ಸೋಂಕಿನ ಬಳಿಕ ಇಳಿಮುಖವಾಗಿದೆ.
ಕೊರೊನಾವೈರಸ್ ನಿರ್ಬಂಧಗಳ ಬಳಿಕ ಜನರು ಪಬ್ ಗಳಿಗೆ ಭೇಟಿ ನೀಡುವುದನ್ನು ಕಡಿಮೆ ಮಾಡಿದೆ. ಜನರು ಮನೆಯಲ್ಲಿ ಸಹ ಸಾಕಷ್ಟು ಕುಡಿಯುತ್ತಿಲ್ಲ. ಒಂದರ್ಥದಲ್ಲಿ ಅವರಿಗೆ ಎಣ್ಣೆಯ ಮೇಲೆ ನಿರಾಸಕ್ತಿ ಬಂದು ಬಿಟ್ಟಿದೆ. ಇದರಿಂದಾಗಿ 2020 ರಿಂದೀಚೆಗೆ ಅಬಕಾರಿ ಮೂಲಗಳಿಂದ ಬರುತ್ತಿದ್ದ ಬರೋಬ್ಬರಿ 6,505 ಕೋಟಿ ರು.ಗಳಷ್ಟು ಆದಾಯ ಕುಸಿತವಾಗಿದೆ.
ಇದಕ್ಕಾಗಿ ಯುವಜನರು ಹೆಚ್ಚಿನ ಮದ್ಯ ಸೇವಿಸಲು ಪ್ರೇರೇಪಿಸಲು ಜಪಾನ್‌ ಸರ್ಕಾರ ʼಸೇಕ್ ವಿವಾʼ ಎಂಬ ಅಭಿಯಾನವನ್ನು ಪ್ರಾರಂಭಸಲಾಗಿದೆ. ಇದರಲ್ಲಿ ಕುಡುಕರು ಹೆಚ್ಚುಹೆಚ್ಚು ಕುಡಿಯುವಂತೆ ಹಲವಾರು ಆಮಿಷಗಳನ್ನು ಒಡ್ಡಲಾಗುತ್ತಿದೆ. ಅವರಿಗಾಗಿ ಆನ್ಲೈನ್ ಮೂಲಕ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.‌ ಕುಡಿತದ ಬಗ್ಗೆ ವ್ಯಾಪಕ ಪ್ರಚಾರವನ್ನು ಮಾಡಲಾಗುತ್ತಿದೆ. ಜೊತೆಗೆ ʼಕುಡಿತವನ್ನು ಹೇಗೆ ಹೆಚ್ಚಿಸುವುದುʼ ಎಂಬ ವಿಚಾರದ ಬಗ್ಗೆ ಸಲಹೆ ಹಂಚಿಕೊಳ್ಳುವಂತೆ ಐಡಿಯಾ ನೀಡುವಂತೆ ಸರ್ಕಾರ ಜನರನ್ನು ಕೇಳಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!