ಸುತ್ತೂರು ಶ್ರೀ ಕ್ಷೇತ್ರದಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ

ಹೊಸದಿಗಂತ ವರದಿ,ಮೈಸೂರು:

ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಭಾನುವಾರ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಉತ್ಸವಗಳು ಜರುಗಿದವು.
ಕೋವಿಡ್ ಹರಡುವಿಕೆ ಹಿನ್ನಲೆಯಲ್ಲಿ ಈ ಬಾರಿ ವಿಜೃಂಭಣೆಯ ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದರೂ, ಒಂದು ದಿನ ಸಾಂಕೇತಿಕವಾಗಿ, ಸರಳವಾಗಿ, ಸಾಂಪ್ರದಾಯಿಕವಾಗಿ ಮಠದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ಜಾತ್ರಾ ಮಹೋತ್ಸವ ನೆರವೇರಿತು. ಈ ಸಂದರ್ಭದಲ್ಲಿ ವಾಟಾಳು ಶ್ರೀಗಳು, ವಿವಿಧ ಮಠಗಳ ಮಠಾಧೀಶರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ ನೆರವೇರಿದ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗು ಯಳಂದೂರು ತಾಲ್ಲೂಕು ದುಗ್ಗಹಟ್ಟಿ ಗ್ರಾಮದ ಸುಂದರಮ್ಮ ವೀರಭದ್ರಪ್ಪ ಪ್ರತಿಷ್ಠಾನದÀ ಸಹಯೋಗದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಬೆಳೆ ಬೆಳೆದ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಳೆ ಬೆಳೆಗೆ ಯಳಂದೂರು ತಾಲೂಕಿನ ಮದ್ದೂರಿನ ಆರ್. ರವೀಶ್‌ಕುಮಾರ್‌ರಿಗೆ ಪ್ರಥಮ, ಗುಂಬಳ್ಳಿಯ ಶಾಂತಮ್ಮರಿಗೆ ದ್ವಿತೀಯ, ಕಬ್ಬು ಬೆಳೆಗೆ ಕೊಳ್ಳೇಗಾಲ ತಾಲೂಕಿನ ಟಗರಪುರದ ನಂಜುAಡಸ್ವಾಮಿಗೆ ಪ್ರಥಮ, ಕಜ್ಜಿಹುಂಡಿಯ ಕೆ.ಎಸ್. ಮಹದೇವಪ್ರಭುರಿಗೆ ದ್ವಿತೀಯ, ಟೊಮ್ಯಾಟೋ ಬೆಳೆಗೆ ಚಾಮರಾಜನಗರ ತಾಲೂಕಿನ ಬದನಗುಪ್ಪೆಯ ಶಿವಮಲ್ಲಪ್ಪಗೆ ಪ್ರಥಮ, ಮೇಲಾಜಿಪುರದ ನಂಜುAಡಸ್ವಾಮಿಗೆ ದ್ವಿತೀಯ, ಮುಸುಕಿನ ಜೋಳದ ಬೆಳೆಗೆ ಹನೂರು ತಾಲೂಕಿನ ಧನಗೆರೆಯ ಮಹದೇವಶೆಟ್ಟಿಗೆ ಪ್ರಥಮ, ಬದನಗುಪ್ಪೆಯ ವಿ.ವೆಂಕಟೇಶ್‌ಗೆ ದ್ವಿತೀಯ, ಪೋಲ್ ಬೀನ್ಸ್ ಬೆಳೆಗೆ ಗುಂಡ್ಲುಪೇಟೆ ತಾಲೂಕಿನ ಬರಗಿಯ ಇ.ನಿಂಗಪ್ಪಗೆ ಪ್ರಥಮ, ಆಲತ್ತೂರಿನ ಎ.ಎಂ. ನಿಖಿಲ್ ದ್ವಿತೀಯ ಸ್ಥಾನ ಪಡೆದಿದ್ದು, ಬಹುಮಾನ ವಿಜೇತರಿಗೆ ಪ್ರಶಸ್ತಿ ಫಲಕ ಹಾಗೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ವಾಟಾಳು ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿ ಮಾತನಾಡಿ, ಪ್ರಶಸ್ತಿ ಪಡೆದವರು ಇತರ ರೈತರಿಗೆ ಮಾದರಿಯಾಗಿ ಮಾರ್ಗದರ್ಶನ ಮಾಡಬೇಕು. ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಿಂದ, ಸ್ವತಃ ನಮ್ಮ ಜಮೀನಿನಲ್ಲೂ 25 ಮೂಟೆ ಬೆಳೆಯುತ್ತಿದ್ದ ಗದ್ದೆಯಲ್ಲಿ 40 ಮೂಟೆ ಭತ್ತವನ್ನು ಬೆಳೆದು, ಕ್ಷೇತ್ರೋತ್ಸವವನ್ನು ಮಾಡಿ ತಳಿ ಪ್ರಚಾರ ಮಾಡಲಾಯಿತು. ಇಂತಹ ಉತ್ತಮ ಕೆಲಸ ಮಾಡಲು ಮೂಲ ಕಾರಣರಾಗಿರುವ ಸುತ್ತೂರು ಶ್ರೀಗಳನ್ನು ಅಭಿನÀಂದಿಸುವುದಾಗಿ ನುಡಿದರು.
ರೈತರನ್ನು ಸನ್ಮಾನಿಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ದುಗ್ಗಹಟ್ಟಿ ಪಿ. ವೀರಭದ್ರಪ್ಪ, ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರವು ಕಾಲಕಾಲಕ್ಕೆ ಹಲವು ತರಬೇತಿ, ಪ್ರಾತ್ಯಕ್ಷಿಕೆ, ಕ್ಷೇತ್ರಭೇಟಿ ಮೂಲಕ ರೈತರಿಗೆ ಉತ್ತಮ ಮಾರ್ಗದರ್ಶನ ನೀಡಿ ಅತ್ಯುತ್ತಮ ಬೆಳೆ ಬೆಳೆಯಲು ಉತ್ತೇಜನ ನೀಡುತ್ತಿದೆ ಎಂದು ತಿಳಿಸಿದರು. ರೈತರು ತಮ್ಮ ಹಿತ್ತ¯ಲ್ಲಿ ಕರಿಬೇವು, ನಿಂಬೆ ಹಾಗು ಇನ್ನಿತರ ದಿನನಿತ್ಯ ಬಳಸುವ ತರಕಾರಿ ಗಿಡಗಳನ್ನು ಬೆಳೆದು ತಮ್ಮ ಆರ್ಥಿಕ ಸಂಪನ್ಮೂಲ ಹಾಗೂ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಶಸ್ತಿ ವಿಜೇತ ರೈತ ಕೆ.ಎಸ್. ಮಹದೇವಪ್ರಭು ಮಾತನಾಡಿ, ಐಸಿಎಆರ್ ಜೆಎಸ್‌ಎಸ್ ಕೆವಿಕೆ ವಿಜ್ಞಾನಿಗಳು ಸಮಯಕ್ಕೆ ಸರಿಯಾಗಿ ತಾಕಿಗೆ ಭೇಟಿ ನೀಡಿ ಉತ್ತಮ ಮಾರ್ಗದರ್ಶನ ನೀಡುತ್ತಾ ಯಾವ ಸಮಯದಲ್ಲಿ ಕರೆ ಮಾಡಿದರೂ ಅದಕ್ಕೆ ಸ್ಪಂದಿಸಿ, ಉತ್ತಮ ಇಳುವರಿ ಪಡೆಯಲು ರೈತರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಜೆಎಸ್‌ಎಸ್ ಕೆವಿಕೆಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮತ್ತೋರ್ವ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ಮಹದೇವಶೆಟ್ಟಿ ಮಾತನಾಡಿ, ರೈತರನ್ನು ಪ್ರಶಸ್ತಿ ನೀಡಿ, ಉತ್ತಮ ಬೆಳೆ ಬೆಳೆಯಲು ಪ್ರೋತ್ಸಾಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಐಸಿಎಆರ್ ಜೆಎಸ್‌ಎಸ್ ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥೆ ಹೆಚ್.ವಿ. ದಿವ್ಯಾ ಪ್ರಶಸ್ತಿ ಪುರಸ್ಕೃತ ರೈತರ ಪರಿಚಯ ಮಾಡಿಕೊಟ್ಟರು. ಹಿರಿಯ ವಿಜ್ಞಾನಿ ಮಂಜುನಾಥ ಅಂಗಡಿ ಕಾರ್ಯಕ್ರಮ ಸಹಾಯಕ ಜೆ.ಜಿ ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!