ಹೊಸದಿಗಂತ ಡಿಜಿಟಲ್ ಡೆಸ್ಕ್:
‘ರಾಜ ರಾಣಿ’ ರಿಯಾಲಿಟಿ ಶೋ ಖ್ಯಾತಿಯ ಜಯಶ್ರೀ ಮತ್ತು ಸ್ಟೀವನ್ ನಡುವೆ ಬ್ರೇಕಪ್ ಆಗಿದೆ.ಈ ಕುರಿತು ಸ್ವತಃ ಜಯಶ್ರೀ ಆರಾಧ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
ಜಯಶ್ರೀ ಬ್ಯುಸಿನೆಸ್ ವುಮನ್ ಆಗಿ ಬೆಳೆಯೋಕೆ ಜೊತೆಯಾಗಿ ನಿಂತ ಸ್ನೇಹಿತ ಇವರು.ಇಬ್ಬರೂ ಒಟ್ಟಿಗೆ ಜೀವನ ಕಟ್ಟಿಕೊಳ್ಳೋ ಕನಸು ಕಂಡವ್ರು. ಇದೇ ಕಾರಣಕ್ಕೆ ಮದುವೇ ಆಗದೇ ಒಟ್ಟಿಗೆ ಜೀವನ ಮಾಡುತ್ತಿದ್ದರು.
ಈ ಜೋಡಿ ರಾಜಾರಾಣಿ ಶೋಗೆ ಆಯ್ಕೆ ಆದಾಗ ಸಾಕಷ್ಟು ವಿರೋಧದ ಮಾತುಗಳು ಕೇಳಿ ಬಂದಿತ್ತು. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡದೇ ಈ ಶೋ ಬಂದಿದ್ದ ಈ ಜೋಡಿ ಮಧ್ಯೆ ಬ್ರೇಕಪ್ ಆಗಿದೆ.
ರಾಜಾರಾಣಿ ರೀಲೋಡೆಡ್ ಕಂಪ್ಲೀಟ್ ಆಗಿರೋ ಸಂಭ್ರಮ ಇನ್ನು ಹಸಿಯಾಗಿಯೇ ಇರುವಾಗಲೇ ಜಯಶ್ರೀ ಆರಾಧ್ಯ ಹಾಗೂ ಸ್ಟೀವನ್ ಜೋಡಿ ಬಹುಕಾಲದ ಸಂಬಂಧಕ್ಕೆ ಬ್ರೇಕ್ ಬಿದ್ದಿದೆ.
ಈ ಜೋಡಿ ರಾಜಾ ರಾಣಿ ಶೋಗೆ ಕಾಲಿಟ್ಟಾಗಿದ್ದಗಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಇದಕ್ಕೆ ಕಾರಣ ಅವರ ಮದುವೆ ವಿಚಾರ. ಶಾಸ್ತ್ರೋಕ್ತವಾಗಿ ನಾವು ಮದುವೆ ಆಗಿಲ್ಲ. ಆದರೆ ಪತಿ ಪತ್ನಿ ಹೇಗೆ ಇರುತ್ತಾರೋ ನಾವು ಹಾಗೇ ಇದ್ದೀವಿ. ನಮಗೆ ಮದುವೆ ಆಗಬಾರದು ಅಂತೇನಿಲ್ಲ. ಯಾಕೋ ಮದುವೆಗೆ ಟೈಮ್ ಕೂಡಿ ಬಂದಿಲ್ಲ ಅಂತ ಹೇಳಿಕೊಂಡಿದ್ದವರು ಈಗ ದೂರ ದೂರ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿ ಬ್ರೇಕಪ್ ಆಗಿರೋ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಇದೀಗ ಖುದ್ದು ನಟಿ, ಬಿಗ್ಬಾಸ್ ಖ್ಯಾತಿಯ ಜಯಶ್ರೀ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಈ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಹೌದು! ನೀವು ಕೇಳುತ್ತಿರುವ ಗಾಳಿ ಮಾತುಗಳು ಸತ್ಯ, ನನ್ನ ಬಾಯ್‌ಫ್ರೆಂಡ್‌ನಿಂದ ದೂರ ಆಗಿದ್ದೀನಿ. ಇನ್ನು ಮುಂದೆ ದಿ ಗ್ಲಾಮರ್ ರೂಮ್‌ಗೆ ಸಂಬಂಧ ಪಟ್ಟ ಮಾಹಿತಿಗೆ ನನ್ನನ್ನು ಸಂಪರ್ಕ ಮಾಡಿ. ಇಲ್ಲವಾದರೆ ದಿ ಗ್ಲಾಮ್ ರೂಮ್ ತಂಡವನ್ನು ಸಂಪರ್ಕಿಸಿ. ನಾನು ಕಟ್ಟಿರುವ ಗ್ಲಾಮ್ ರೂಮ್ ಸಂಸ್ಥೆ ಯಾವುದೇ ಪಾರ್ಟನರ್‌ಶಿಪ್ ಅಥವಾ ಹೂಡಿಕೆದಾರರ ಮೇಲೆ ನಡೆಯುತ್ತಿರಲಿಲ್ಲ. ಇದಕ್ಕೆ ಹಣವನ್ನು ಬ್ಯಾಂಕ್ ಲೋನ್ ಮುಖಾಂತರ ಹೊಂದಿಸಿದ್ದೆ, ಅದನ್ನು ನಾನೇ ಕಟ್ಟುತ್ತಿರುವುದು. ಹಿಂದೆ ಮತ್ತು ಮುಂದೆ ಕೂಡ ನಾನೇ ಕಟ್ಟುವುದು. ಇದುವರೆಗೂ ನೀವು ನನ್ನ ಮೇಲೆ ತೋರಿಸಿರುವ ಪ್ರೀತಿ, ಕಾಳಜಿ ಮತ್ತು ಸಹನೆಗೆ ನಾನು ಎಂದಿಗೂ ಚಿರ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.