ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಚರ್ಚೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಯಾರಿಗೆ ಯಾರೂ ಅನಿವಾರ್ಯವಲ್ಲ . ಇನ್ನೂ ಸಾಕಷ್ಟು ಸಮಯಗಳಿವೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಬೆಳವಣಿಗೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಅಷ್ಟೇ. ನಾಳೆ ಕಾರ್ಯಕರ್ತರ ಸಭೆ ಕರೆಯಲು ದೇವೇಗೌಡರು ಹೇಳಿದ್ದಾರೆ. ಕಾರ್ಯಕರ್ತರ ಅಭಿಪ್ರಾಯವನ್ನೂ ಕೇಳಬೇಕಲ್ಲವೇ? ಎಲ್ಲದಕ್ಕೂ ಉತ್ತರ ನೀಡುವ ಕಾಲ ಇನ್ನೂ ದೂರ ಇದೆ ಎಂದರು.
ಯಾವುದೇ ರಾಜಕಾರಣಿಗೂ ಹತಾಶೆ ಎನ್ನುವುದು ಬರುವುದಿಲ್ಲ. ಆದರೆ ಇಲ್ಲಿ ಹತಾಶೆಯಾಗುತ್ತಿರುವುದು, ನಡುಕ ಆಗಿರುವುದು ಕಾಂಗ್ರೆಸ್ ಗೆ. ದೆಹಲಿಗೆ ಹೋಗುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಕೆಲವು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ನನಗೆ ಯಾವುದೇ ಆತುರವಿಲ್ಲ ಎಂದು ಹೇಳಿದರು