ನನ್ನ ಶಕ್ತಿ, ಪ್ರೇರಣೆ, ದಾರಿದೀಪ ಆಗಿರುವ ದೇವೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯ: ಹೆಚ್.ಡಿ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್‌ ವರಿಷ್ಠ ಹೆಚ್‌.ಡಿ ದೇವೇಗೌಡರಿಗೆ ಇಂದು 91ರ ಹುಟ್ಟು ಹಬ್ಬದ ಸಂಭ್ರಮ. ಈ ಕುರಿತು ಶುಭಾಶಯ ಕೋರಿರುವ ಜೆಡಿಎಸ್‌ ನಾಯಕ ಹೆಚ್‌.ಡಿ ಕುಮಾರಸ್ವಾಮಿ, ದೇವೇಗೌಡ ಅವರು ನಮ್ಮೆಲ್ಲರನ್ನೂ ದೀರ್ಘಕಾಲ ಮುನ್ನಡೆಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ʼಭಾರತದ 11ನೇ ಪ್ರಧಾನಮಂತ್ರಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ನನ್ನ ಪೂಜ್ಯ ತಂದೆಯವರಾದ ಶ್ರೀ ಹೆಚ್.ಡಿ ದೇವೇಗೌಡ ಅವರಿಗೆ 91ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು ಹಾಗೂ ನನ್ನ ಭಕ್ತಿಪೂರ್ವಕ ಪ್ರಣಾಮಗಳುʼ ಎಂದು ಬರೆದಿದ್ದಾರೆ.

ಮತ್ತೊಂದು ಟ್ವೀಟ್‌ ಹಾಕಿ, ʼನನ್ನ ಶಕ್ತಿ, ಪ್ರೇರಣೆ, ದಾರಿದೀಪ ಆಗಿರುವ ಅವರು, ಜೆಡಿಎಸ್‌ ಪಾಲಿನ ಮಹಾನ್ ಚೈತನ್ಯ. ದೇಶ ಮತ್ತು ಕನ್ನಡನಾಡಿಗೆ ಅವರ ಕೊಡುಗೆ ಅವಿಸ್ಮರಣೀಯ. ಅವರ ಅನುಭವಧಾರೆ ನಮಗೆಲ್ಲ ಅಮೃತಧಾರೆ. ಆ ಭಗವಂತ ಶ್ರೀಯುತರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ. ಅವರು ನಮ್ಮೆಲ್ಲರನ್ನು ಇನ್ನೂ ದೀರ್ಘಕಾಲ ಮುನ್ನಡೆಸಲಿ ಎಂದು ಪ್ರಾರ್ಥಿಸುತ್ತೇನೆʼ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!