ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾಗಿರುವ ಜಾಯಿಂಟ್ ಎಂಟ್ರನ್ಸ್ ಎಕ್ಸಾಮ್ ಮೇನ್ (JEE MAIN 2025) ನ ಎರಡನೇ ಸೆಷನ್ ಏಪ್ರಿಲ್ 2 ರಂದು ಆರಂಭವಾಗಲಿದೆ.
ಪರೀಕ್ಷೆಗೆ ಮುನ್ನ, ಪರೀಕ್ಷೆಯ ವೇಳೆ ಮತ್ತು ನಂತರ ಪಾಲಿಸಬೇಕಾದ ನಿರ್ದೇಶನಗಳನ್ನು ಪ್ರವೇಶ ಪತ್ರಗಳಲ್ಲಿ ನೀಡಲಾಗಿದೆ. ಪರೀಕ್ಷಾರ್ಥಿಗಳ ಡ್ರೆಸ್ ಕೋಡ್ ಮತ್ತು ಸಂಪೂರ್ಣ ಪರೀಕ್ಷಾ ಮಾರ್ಗಸೂಚಿ ಕೂಡ ಬಿಡುಗಡೆ ಮಾಡಲಾಗಿದೆ.
ಕೋಟಾ ನಗರದಲ್ಲಿ ಒಟ್ಟು ನಾಲ್ಕು ಪರೀಕ್ಷಾ ಕೇಂದ್ರಗಳಿವೆ. ರಾಣ್‌ಪುರ, ಗೋಬರಿಯಾ ಬಾವಡಿ, ವಿಶ್ವಕರ್ಮ ಸರ್ಕಲ್ ಹತ್ತಿರ ಮತ್ತು ಇಂದ್ರಪ್ರಸ್ಥ ಕೈಗಾರಿಕಾ ಪ್ರದೇಶದಲ್ಲಿ ಈ ಕೇಂದ್ರಗಳಿವೆ.
ಈ ಕುರಿತು ಮಾತನಾಡಿದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ರಾಜಸ್ಥಾನದ ಸಂಯೋಜಕ ಇಂಜಿನಿಯರ್ ಡಾ. ಪ್ರದೀಪ್ ಸಿಂಗ್ ಗೌಡ, ಪರೀಕ್ಷೆಗಳು ಬೆಳಗಿನ ಅವಧಿಯಲ್ಲಿ 9 ರಿಂದ 12 ರವರೆಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ 3 ರಿಂದ 6ರ ಮಧ್ಯೆ ನಡೆಯಲಿವೆ ಎಂದು ತಿಳಿಸಿದರು.
ಬೆಳಗಿನ ಅವಧಿಯ ಪರೀಕ್ಷೆಯಲ್ಲಿ 7 ಗಂಟೆಗೆ ಅಭ್ಯರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ ಮತ್ತು 8:30ಕ್ಕೆ ಪ್ರವೇಶ ಬಂದ್ ಮಾಡಲಾಗುತ್ತದೆ. ಸಂಜೆ ಅವಧಿಯಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರವೇಶ ನೀಡಲಾಗುವುದು ಮತ್ತು 2:30ಕ್ಕೆ ಪ್ರವೇಶ ಬಂದ್ ಮಾಡಲಾಗುವುದು.
ಪರೀಕ್ಷೆಯನ್ನು ಗಮನದಲ್ಲಿಟ್ಟು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹಲವು ನಿರ್ಬಂಧಗಳನ್ನು ವಿಧಿಸಿದೆ. ಅಲ್ಲದೇ ಪರೀಕ್ಷಾ ಕೇಂದ್ರದೊಳಗೆ ಕೆಲ ವಸ್ತುಗಳನ್ನು ತರದಂತೆ ನಿಷೇಧಿಸಿದೆ. ಪರೀಕ್ಷಾರ್ಥಿಗಳು ನಾಲ್ಕು ಪುಟಗಳ ಪ್ರವೇಶ ಪತ್ರ ಮತ್ತು ಅದರಲ್ಲಿ ನೀಡಿರುವ ನಿರ್ದೇಶನಗಳನ್ನು ಸರಿಯಾಗಿ ಓದಿ ಪಾಲನೆ ಮಾಡುವುದು ಅಗತ್ಯವಾಗಿದೆ.
ಅಭ್ಯರ್ಥಿಯು ಪರೀಕ್ಷೆಯ ದಿನ ಆನ್‌ಲೈನ್ ಆಪ್ಲಿಕೇಶನ್ ಫಾರ್ಮ್‌ನಲ್ಲಿ ಅಪ್ ಲೋಡ್ ಮಾಡಿರುವ ಫೋಟೋ ಐಡಿ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯ . ಆಧಾರ್ ಕಾರ್ಡ್ ಇಲ್ಲದ ಅಭ್ಯರ್ಥಿಗಳು ಘೋಷಣಾ ಫಾರ್ಮ್ ತುಂಬಿಕೊಂಡು ಕೊಂಡೊಯ್ಯಬೇಕು. ಪರೀಕ್ಷೆ ಸಂಪೂರ್ಣವಾದ ಬಳಿಕ ಬಳಸಿದ ಕಚ್ಚಾ ಕಾಗದಗಳು ಮತ್ತು ಪ್ರವೇಶ ಪತ್ರಗಳನ್ನು ಡ್ರಾಪ್ ಬಾಕ್ಸ್‌ನಲ್ಲಿ ಹಾಕಬೇಕಾಗುತ್ತದೆ. ಹೀಗೆ ಮಾಡದ ಅಭ್ಯರ್ಥಿಗಳ OMR ಶೀಟ್ ಮೌಲ್ಯಮಾಪನ ಮಾಡಲಾಗುವುದಿಲ್ಲ.
ಪರೀಕ್ಷಾ ಕೇಂದ್ರದೊಳಗೆ ಈ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು:
ಪಾರದರ್ಶಕ ನೀರಿನ ಬಾಟಲಿ
ಪಾರದರ್ಶಕ ಬಾಲ್ – ಪಾಯಿಂಟ್ ಪೆನ್
ಎ – 4 ಗಾತ್ರದ ಕಾಗದದ ಮೇಲೆ ಮುದ್ರಿಸಲಾದ ಪ್ರವೇಶ ಪತ್ರ
ಕೆಲ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಆನ್ ಲೈನ್ ಅರ್ಜಿಯಲ್ಲಿ ನೀಡಿರುವ ಮೂಲ ಐಡಿ ಪ್ರೂಫ್
ಈ ಎಲ್ಲದಕ್ಕೂ ಇರಲಿದೆ ನಿರ್ಬಂಧ:
ದೊಡ್ಡ ಸೋಲ್ ಹೊಂದಿದ ಬೂಟುಗಳು ಮತ್ತು ದೊಡ್ಡ ಬಟನ್ ಹೊಂದಿದ ಉಡುಪು
ಎಲೆಕ್ಟ್ರಾನಿಕ್ ಗ್ಯಾಜೆಟ್ಗಳು ಮತ್ತು ಕ್ಯಾಲ್ಕ್ಯುಲೇಟರ್ ಇರುವ ಯಾವುದೇ ಗ್ಯಾಜೆಟ್
ಸ್ಮಾರ್ಟ್ ವಾಚ್, ಮೊಬೈಲ್ ಫೋನ್, ಕೀ ಚೇನ್, ಇಯರ್‌ಫೋನ್‌ಗಳು, ಬ್ಲೂಟೂತ್ ಮತ್ತು ಬ್ಯಾಗ್
ಚಿನ್ನ-ಬೆಳ್ಳಿಯ ಆಭರಣಗಳು, ಕಡಗ, ಕಿವಿಯೋಲೆ, ಮೂಗುತಿ, ಪಾಯಲ್, ಬ್ರೇಸ್ ಲೆಟ್
ದೇವರ ಲಾಕೆಟ್ಗಳು
ಪರೀಕ್ಷೆಯ ವೇಳೆ ಈ ವಿಷಯಗಳ ಬಗ್ಗೆ ಗಮನವಿರಲಿ:
ಶಾಂತವಾಗಿ ಪರೀಕ್ಷಾ ಕೇಂದ್ರ ಪ್ರವೇಶಿಸಿ ಮತ್ತು ಪರೀಕ್ಷೆಗೆ ಸಂಬಂಧಿಸಿದ ಅನಗತ್ಯ ವಿವರಗಳನ್ನು ಚರ್ಚಿಸಬೇಡಿ
ಸುರಕ್ಷಾ ಪರಿಶೀಲನೆಗೆ ಸಹಕಾರ ನೀಡಿ
ಸುರಕ್ಷಾ ಸಿಬ್ಬಂದಿಯೊಂದಿಗೆ ವಾದ ಮಾಡಬೇಡಿ
ಎಲ್ಲಾ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಪಾಲಿಸಿ
ಬಯೋ ಬ್ರೇಕ್ನಿಂದ ಒಳಬರುವಾಗ ಮತ್ತೆ ಸುರಕ್ಷಾ ತಪಾಸಣೆ ಮಾಡಿಲಾಗುತ್ತದೆ.
ಪರೀಕ್ಷೆಯ ಸಮಯ ಮುಗಿದ ಮೇಲೆ ಪ್ರವೇಶ ಪತ್ರ ಮತ್ತು ರಫ್ ಶೀಟ್ಗಳನ್ನು ನಿಗದಿತ ಡ್ರಾಪ್‌ಬಾಕ್ಸ್‌ನಲ್ಲಿ ಹಾಕಿ