Sunday, March 26, 2023

Latest Posts

SHOCKING NEWS | ಟೈರ್ ಬ್ಲಾಸ್ಟ್ ಆಗಿ ಟ್ರಕ್‌ಗೆ ಡಿಕ್ಕಿ ಹೊಡೆದ ಜೀಪ್ : ಸ್ಥಳದಲ್ಲೇ ಏಳು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್‌ನ ಪಾಟನ್‌ನಲ್ಲಿ ಜೀಪ್ ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ.

ರಾಧನ್‌ಪುರದ ವಾಹಾಹಿ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದ್ದು, ಜೀಪ್ ಟೈರ್ ಸ್ಫೋಟಗೊಂಡು ರಸ್ತೆಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಸಂಜುಬೆನ್ ಫುಲ್ವಾರಿ, ದೂದಾಭಾಯಿ, ರಾಧಾಬೆನ್, ಕಾಜಲ್‌ಬೆನ್, ಅಮೃತಾಬೆನ್, ಪೀನಲ್ ವಂಜಾರಾ ಮೃತರು. ಜೀಪ್‌ನಲ್ಲಿ 15 ಮಂದಿ ಇದ್ದರು ಎನ್ನಲಾಗಿದೆ. ಗಾಯಗೊಂಡ ಎಂಟು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಜೀಪ್ 15 ಮಂದಿ ಕೂರುವಷ್ಟು ಸಾಮರ್ಥ್ಯ ಹೊಂದಿಲ್ಲ, ಹಣಕ್ಕಾಗಿ ಚಾಲಕ ಹಳೆಯ ವಾಹನದಲ್ಲಿ 15 ಮಂದಿಯನ್ನು ತುಂಬಿಕೊಂಡು ಹೋಗಿದ್ದರು ಎಂದು ಮೃತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!