ಪಿರಿಯಡ್ಸ್ ಸಮಯದಲ್ಲಿ ಆಟಗಾರರು ಅನುಭವಿಸುವ ಕಷ್ಟದ ಬಗ್ಗೆ ಮಾತನಾಡಿದ ಜೆಮಿಮಾ ರಾಡ್ರಿಗಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಿಳಾ ಕ್ರಿಕೆಟಿಗರ ವೈಯಕ್ತಿಕ ಜೀವನದ ಬಗ್ಗೆ ಭಾರತದ ಮಹಿಳಾ ಕ್ರಿಕೆಟರ್ ಜೆಮಿಮಾ ರಾಡ್ರಿಗಸ್ ಮಾತನಾಡಿದ್ದಾರೆ. ಪಿರಿಯಡ್ಸ್ ಸಮಯದಲ್ಲಿ ಫೀಲ್ಡ್‌ಗೆ ಇಳಿಯುವ ಮಹಿಳಾ ಆಟಗಾರರ ಮನಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಜೆಮಿಮಾ ಹೇಳಿದ್ದಾರೆ.

ಎಷ್ಟೋ ಆಟಗಾರರು ಪಿರಿಯಡ್ಸ್ ಸಮಯದಲ್ಲಿ ಕಷ್ಟ ಅನುಭವಿಸುತ್ತಾರೆ. ಹೊಟ್ಟೆ ನೋವಿನ ಜೊತೆಗೆ ಯುನಿಫಾರ್ಮ್ ಮೇಲೆ ಕಲೆಯಾಗಿ ಕಾಣಿಸಿಬಿಟ್ಟರೆ ಎನ್ನುವ ಭಯ ಕೂಡ ಅವರಿಗೆ ಇರುತ್ತದೆ. ಕೆಲವರಿಗೆ ನಡೆಯುವುದು ಕಷ್ಟವಾಗಿರುತ್ತದೆ. ಅಂಥ ಸನ್ನಿವೇಶದಲ್ಲೂ ನೋವುನಿವಾರಕ ತೆಗೆದುಕೊಂಡು ಫೀಲ್ಡಿಂಗ್ ಮಾಡುತ್ತಾರೆ. ಬಟ್ಟೆಗೆ ಕಲೆಯಾಗಬಾರದು ಎಂದು ಮನಸ್ಸಿನಲ್ಲಿ ಭಯ ಪಡುತ್ತಾರೆ. ಪದೆ ಪದೆ ವಾಶ್‌ರೂಂಗೆ ಹೋಗುತ್ತಾರೆ. ಈ ಸಮಸ್ಯೆಗಳು ಯಾರಿಗೂ ಅರ್ಥಆಗೋದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!