ಜೆರ್ಸಿ ನಂಬರ್ 18: ಇದರ ಹಿಂದಿನ ಸಂಬಂಧ ಹೇಳಿದ ಕೊಹ್ಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರ ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾತ್ರವಲ್ಲದೇ ಮೈದಾನದಲ್ಲಿದ್ದಾಗ ಅವರ ಆ ಆಟ ನೋಡುವುದೇ ಒಂದು ಖುಷಿ..

ಒಬ್ಬ ಕ್ರೀಡಾಪಟು ಒಂದು ತಂಡದ ಪರ ಪ್ರದರ್ಶನ ನೀಡುವಾಗ ಸಾಮಾನ್ಯವಾಗಿ ಜೆರ್ಸಿ ಗಳಿಗೆ ನಂಬರ್ ನೀಡುತ್ತಾರೆ. ಅದೇ ರೀತಿ ಕೊಹ್ಲಿಗೆ ನಂಬರ್ 18 ನೀಡಲಾಗಿದೆ.

ಇದೀಗ ತಮ್ಮ ಜೀವನದಲ್ಲಿ 18 ನಂಬರಿಗೆ ಎಷ್ಟು ಪ್ರಾಮುಖ್ಯತೆಯಿದೆ ಎನ್ನುವುದನ್ನು ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
ಆರಂಭದಲ್ಲಿ ಇದು ಕೇವಲ ಒಂದು ನಂಬರ್ ಆಗಿತ್ತು ಅಷ್ಟೇ, ಆದರೆ ಇದಾದ ಕೆಲ ವರ್ಷಗಳ ಬಳಿಕ ಈ ನಂಬರ್‌ಗೂ ತಮಗೂ ಇರುವ ಅವಿನಾಭಾವ ಸಂಬಂಧವೇನು ಎನ್ನುವುದನ್ನು ವಿರಾಟ್ ಕೊಹ್ಲಿ ಮೆಲುಕು ಹಾಕಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ, 18 ನಂಬರ್‌ ನನ್ನ ಪಾಲಿಗೆ ಕೇವಲ ಒಂದು ನಂಬರ್ ಆಗಿತ್ತು. ನಾನು ಅಂಡರ್ 19 ಭಾರತ ತಂಡದಲ್ಲಿ ಸ್ಥಾನ ಪಡೆದಾಗ ನನಗೆ ಈ ನಂಬರ್ ನೀಡಲಾಗಿತ್ತು. ಇದಾದ ಕೆಲ ವರ್ಷಗಳ ಬಳಿಕ ಈ ನಂಬರ್ ನನ್ನ ಪಾಲಿಗೆ ಅತ್ಯಂತ ಮಹತ್ವದ ನಂಬರ್ ಆಗಿ ಬದಲಾಯಿತು. ನಾನು ಭಾರತ ಕ್ರಿಕೆಟ್ ತಂಡಕ್ಕೆ ಆಗಸ್ಟ್ 18ರಂದು ಪಾದಾರ್ಪಣೆ ಮಾಡಿದೆ. ನನ್ನ ತಂದೆ ಡಿಸೆಂಬರ್ 18, 2006ರಲ್ಲಿ ಕೊನೆಯುಸಿರೆಳೆದರು. ಈ ಎರಡು ಮಹತ್ವದ ಘಟನಾವಳಿಗಳು 18ರಂದೇ ನಡೆದವು. ಈ ನಂಬರ್‌ಗೂ ನನಗೂ ಏನೋ ಒಂದು ರೀತಿಯ ಅಲೌಖಿಕ ಸಂಬಂಧವಿದೆ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಾನು ಕ್ರಿಕೆಟ್ ಆಡಲು ಮೈದಾನಕ್ಕಿಳಿದಾಗ, ಜನರು ನನ್ನ ಹೆಸರಿನ ಹಾಗೂ ನಂಬರಿನ ಜೆರ್ಸಿ ತೊಟ್ಟು ಬಂದಿರುವುದನ್ನು ನೋಡಿ ಖುಷಿಯಾಗುತ್ತದೆ. ಯಾಕೆಂದರೆ ನಾನು ಚಿಕ್ಕವನಿದ್ದಾಗ ನನ್ನ ಹೀರೋಗಳ ಜೆರ್ಸಿ ತೊಟ್ಟು ಖುಷಿ ಪಡುತ್ತಿದ್ದೆ. ಇದೀಗ ನನ್ನ ಜೆರ್ಸಿಯನ್ನು ಜನರು ತೊಡುವುದನ್ನು ನೋಡಿದರೆ ಖುಷಿಯಾಗುತ್ತದೆ. ದೇವರ ದಯೆಯಿಂದ ಅಂತಹ ಅವಕಾಶ ನನಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!