Friday, March 24, 2023

Latest Posts

ಜೆಎನ್‌ಯು ಹೊಸ ನಿಯಮ:ಧರಣಿ ನಡೆಸಿದರೆ 50ಸಾವಿರ ರೂ. ದಂಡ, ನಾಳೆಯಿಂದಲೇ ಅನ್ವಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ನಡೆಸುವುದರ ಬಗ್ಗೆ ಆಯಾ ಕಾಲೇಜಿನ ಆಡಳಿತ ಮಂಡಳಿ ಕಳವಳ ವ್ಯಕ್ತಪಡಿಸುತ್ತಾರೆ. ಇದೀಗ  ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ನೋಟೀಸ್ ಜಾರಿ ಮಾಡಿದ್ದು, ಕ್ಯಾಂಪಸ್‌ಗಳಲ್ಲಿ ಶಿಸ್ತಿನ ಕೊರತೆ ಕಂಡುಬಂದರೆ ಭಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಈ ಸಂಬಂಧ ಹೊರಡಿಸಿರುವ 10 ಪುಟಗಳ ಅಧಿಸೂಚನೆಯಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

ಕ್ಯಾಂಪಸ್‌ನಲ್ಲಿ ಧರಣಿ ನಡೆಸಿದರೆ 20,000, ಅಶಿಸ್ತು 50,000, ಧರಣಿ ಮತ್ತು ಆಂದೋಲನದ ಹೆಸರಿನಲ್ಲಿ ಹಿಂಸಾಚಾರ ನಡೆಸಿದರೆ 30,000 ದಂಡ ವಿಧಿಸಲಾಗುವುದು ಎಂದು ತಿಳಿಸಿದೆ. ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಯಾವುದೇ ಅಶಿಸ್ತು ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅಧಿಸೂಚನೆಯಲ್ಲಿ ಪ್ರಕಟಿಸಿರುವ ನಿಯಮಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಘೋಷಿಸಲಾಗಿದೆ.

ಈ ಎಲ್ಲಾ ನಿಯಮಗಳು ಫೆಬ್ರವರಿ 3 (2023) ರಿಂದ ಜಾರಿಗೆ ಬರುತ್ತವೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಕೇಂದ್ರೀಕರಿಸಿ ತಮ್ಮ ಗುರಿ ಸಾಧಿಸುವಂತೆ ಸಲಹೆ ನೀಡಲಾಗಿದೆ. ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆಯುವ ಪ್ರತಿಭಟನೆಗಳಿಂದಾಗಿ ಈ ನಿಯಮಗಳನ್ನು ತಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!