Friday, March 31, 2023

Latest Posts

ಟ್ವೀಟರ್‌ನಲ್ಲಿ ಮತ್ತೆ ಉದ್ಯೋಗ ಕಡಿತ: 200 ಜನರನ್ನು ಹೊರಹಾಕಿದ ಮಸ್ಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜನಪ್ರಿಯ ಸಾಮಾಜಿಕ ಜಾಲತಾಣ ಟ್ವೀಟರ್‌ ಇದೀಗ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ನಡೆಸಿದೆ. ಬಿಲಿಯನೇರ್‌ ಎಲಾನ್‌ ಮಸ್ಕ್‌ ಟ್ವೀಟರ್‌ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಸಿಇಒ ಆದಿಯಾಗಿ ಸಾವಿರಾರು ಜನರನ್ನು ಉದ್ಯೋಗದಿಂದ ವಜಾಗೊಳಿಸಿದ್ದರು. ಈ ನಿರ್ಧಾರದ ನಂತರ ಇನ್ನು ಉದ್ಯೋಗ ಕಡಿತಗಳು ನಡೆಯುವುದಿಲ್ಲ, ನಾನು ಟ್ವೀಟರ್‌ ಅನ್ನು ಉನ್ನತ ಹಂತಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದರು. ಆದರೆ ಇದೀಗ ಟ್ವೀಟರ್‌ ಹೊಸತಾಗಿ ಉದ್ಯೀಗ ಕಡಿತಗಳನ್ನು ಘೋಷಿಸಿದ್ದು ಒಟ್ಟಾರೆಯಾಗಿ 200 ಉದ್ಯೋಗಿಗಳನ್ನು ಹೊರಹಾಕಲಿದೆ.

ಉತ್ಪನ್ನ ನಿರ್ವಾಹಕರು, ಡೇಟಾ ವಿಜ್ಞಾನಿಗಳು ಮತ್ತು ಯಂತ್ರ ಕಲಿಕೆ ಮತ್ತು ಸೈಟ್ ವಿಶ್ವಾಸಾರ್ಹತೆಯಲ್ಲಿ ಕೆಲಸ ಮಾಡಿದ ಎಂಜಿನಿಯರ್‌ಗಳ ಮೇಲೆ ಈ ಉದ್ಯೋಗಕಡಿತಗಳು ಪರಿಣಾಮ ಬೀರಿವೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿವೆ. ಹಿಂದಿನ ಉದ್ಯೋಗ ಕಡಿತದ ನಂತರ ಟ್ವೀಟರ್‌ ಸುಮಾರು 2,300 ಉದ್ಯೋಗಿಗಳನ್ನು ಹೊಂದಿತ್ತು. ಇದೀಗ ಈ ತಂಡದಲ್ಲಿನ 200 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಜಾಹೀರಾತು ಆದಾಯದ ವಿಷಯದಲ್ಲಿ ಟ್ವೀಟರ್‌ ನಷ್ಟ ಅನುಭವಿಸುತ್ತಿದೆ ಎಂದು ಈ ಹಿಂದೆ ಮಸ್ಕ್‌ ಹೇಳಿದ್ದರು. ಆದಾಯದ ಕುಸಿತವನ್ನು ಸರಿದೂಗಿಸುವ ಗುರಿಯೊಂದಿಗೆ ಟ್ವೀಟರ್‌ ಈ ಉದ್ಯೋಗ ಕಡಿತಗಳನ್ನು ನಡೆಸಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!