ಹೊಸದಿಗಂತ ವರದಿ, ಹಾವೇರಿ (ಸವಣೂರ)
ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಪರ ರೈತರು ಸ್ವಯಂ ಪ್ರೇರಣೆಯಿಂದ ಸೋಮವಾರ ಜೋಡೆತ್ತಿನ ಚಕ್ಕಡಿ ಸಮೇತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡರು.
ಬಸವರಾಜ ಬೊಮ್ಮಾಯಿ ಅವರು ಶಿಗ್ಗಾವ-ಸವಣೂರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ‘ನಮ್ಮ ಹೊಲ, ನಮ್ಮದಾರಿ’ ಅಡಿಯಲ್ಲಿ ಹೂಲಗಳಿಗೆ ರಸ್ತೆ, ಹಾಗೂ ನಮ್ಮೂರು, ನಮ್ಮ ಕೆರೆ ಅಭಿವೃದ್ದಿ’ ಅಡಿಯಲ್ಲಿ ಕೆರೆಗೆ ನೀರು, ಹಲವಾರು ಬಡ ರೈತರಿಗೆ ಮನೆ ನಿರ್ಮಾನಕ್ಕೆ ಹಣ ನೀಡಿ ಹಲವಾರು ರೈತರು ಉಸಿರಾಡುವಂತೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಈ ಕ್ಷೇತ್ರದಲ್ಲಿ ಎಲ್ಲಿಯವರಿಗೆ ಇರುವವರೂ ಅಲ್ಲಿಯವರೆಗೆ ರೈತರು ಸದಾ ಬೆಂಬಲವನ್ನು ಕೊಡುವದಾಗಿ ರೈತ ಮುಖಂಡ ಶಂಕರಗೌಡ ಪಾಟೀಲ ತಿಳಿಸಿದರು.
೨೦೦೮ರಲ್ಲಿ ರೈತರ ಕಷ್ಟಗಳನ್ನು ಕೆಳಿ ಕಿವಿ ಇದ್ದು ಇಲ್ಲದಂತೆ ರಾಜಕಾರಣಿಗಳು ವರ್ತಸುತ್ತಿದ್ದರು ಆದರೆ, ಬಸವರಾಜ ಬೊಮ್ಮಾಯಿ ರೈತರ ಮನವಿಗಳನ್ನು ಮಾತ್ರ ಕಡೆಗಣಿಸದೆ ಮೂಲಭೂತ ಸೌಕರ್ಯಗಳನ್ನು ನಮಗೆ ನೀಡಿ ರೈತಹಿತೈಷಿಗಳಾಗಿ ರೈತರ ಕಷ್ಟಗಳಿಗೆ ಸ್ಪಂದಿಸುವ ಜನ ನಾಯಕ ಎಂದರು.
ಹುರಳಿಕುಪ್ಪಿ ವೃತ್ತದಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆರಂಭಗೊಂಡ ೭೫ಕ್ಕೂ ಹೆಚ್ಚಿನ ಜೋಡೆತ್ತು-ಚಕ್ಕಡಿ ಮೆರವಣಿಗೆ ಗೌಡ್ರ ಓಣಿ, ಶುಕ್ರವಾರ ಪೇಟೆ, ಉಪ್ಪಾರ ಓಣಿ, ದಂಡಿನ ಪೇಟೆ, ಸಿಂಪಿಗಲ್ಲಿ, ಬುಧವಾರ ಪೇಟೆ, ಕೋರಿಪೇಟೆ, ಸೈಬಣ್ಣನವರ ಓಣಿ, ಸುಣಗಾರ ಓಣಿ, ಚಿತ್ರಗಾರ ಓಣಿಯಲ್ಲಿ ಹಾಯ್ದು ಭರಮಲಿಂಗೇಶ್ವರ ವೃತ್ತಕ್ಕೆ ಸಂಪನ್ನಗೊಂಡಿತು.
ಸ್ಥಳೀಯ ರೈತ ಮುಖಂಡರಾದ ಶಂಕರಗೌಡ ಪಾಟೀಲ, ಗಣೇಶ ಗಾಣಗೇರ, ಶಿವಲಿಂಗಪ್ಪ ಕುಲಕರ್ಣಿ, ಉಮೇಶ ಕುಲಕರ್ಣಿ, ಸಂಗಪ್ಪ ಏರೇಶಿಮಿ, ಹನುಮಂತಗೌಡ ಮುದಿಗೌಡ್ರ, ಬಸನಗೌಡ ವಾಡೇದ, ಈಶ್ವರಗೌಡ ಪಾಟೀಲ, ವೀರನಗೌಡ ಪಾಟೀಲ ಇತರರು ಪಾಲ್ಗೊಂಡಿದ್ದರು.