ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೋಗ ಜಲಪಾತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ತಾಣ ಆಗಬೇಕು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡಿನ ಪ್ರಕೃತಿ ಕೊಟ್ಟ ಪ್ರವಾಸೋದ್ಯಮ ಸ್ಥಳ ಜೋಗ ಜಲಪಾತ. ಇಲ್ಲಿ ಪ್ರವಾಸಿಗರಿಗಾಗಿ ಹೋಟೆಲ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ. ಆದರೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಅಭಿವೃದ್ದಿ ಬಗ್ಗೆ ಅನೇಕ ಸರ್ಕಾರಗಳು ಭಾಷಣ ಮಾಡಿಕೊಂಡು ಬರುತ್ತಿವೆ. ಜೋಗ ಅಭಿವೃದ್ದಿಗೆ ಯಡಿಯೂರಪ್ಪ ಸಾಕಷ್ಟು ಅನುದಾನ ಕೊಟ್ಟು, ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಹೋಟೆಲ್ ನಿರ್ಮಾಣ ಮಾಡಲು ಅನುಮತಿ ಸಿಕ್ಕಿದೆ. ಹೊರಗಡೆಯಿಂದ ಬರುವ ಪ್ರವಾಸಿಗರಿಗೆ ಹೋಟೆಲ್ ಅವಶ್ಯಕತೆ ಇತ್ತು. ಆದಷ್ಟು ಬೇಗ ಕಾಮಗಾರಿ ಮುಗಿಯಬೇಕು. ಶಿವಮೊಗ್ಗ ಸಮಗ್ರ ಪ್ರವಾಸಿ ತಾಣವಾಗಬೇಕು ಎಂದಿದ್ದಾರೆ.