HOLLYWOOD| ಜೋಕರ್ 2 ಸೀಕ್ವೆಲ್‌ ಶುರು: 2024 ರ ವೇಳೆಗೆ ಪ್ರೇಕ್ಷಕರ ಮುಂದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಲಿವುಡ್ ಹೀರೋ ಜೋಕ್ವಿನ್ ಫೀನಿಕ್ಸ್ ನಾಯಕನಾಗಿ ಮೂರು ವರ್ಷಗಳ ಹಿಂದೆ ಬಿಡುಗಡೆಯಾದ ಜೋಕರ್ ಸಿನಿಮಾ ವಿಶ್ವಾದ್ಯಂತ ದೊಡ್ಡ ಯಶಸ್ಸಿನ ಜೊತೆಗೆ ಕಲೆಕ್ಷನ್ ಹಾಗೆ ಆಸ್ಕರ್ ಪ್ರಶಸ್ತಿಯನ್ನೂ ಗೆದ್ದುಕೊಂಡಿತು. ಈ ಚಿತ್ರದಲ್ಲಿ ಸಂಗೀತ ಮತ್ತು ನಾಯಕ ಜೋಕ್ವಿನ್ ಫೀನಿಕ್ಸ್ ಪಾತ್ರಕ್ಕೆ ತುಂಬಾ ಜನಪ್ರಿಯ ಮನ್ನಣೆ ಸಿಕ್ಕಿತ್ತು. ಕೆಲವು ತಿಂಗಳ ಹಿಂದೆ, ನಿರ್ದೇಶಕರು ಈ ಚಿತ್ರದ ಮುಂದುವರಿದ ಭಾಗವನ್ನು ನಿರ್ದೇಶಿಸುವುದಾಗಿ ಘೋಷಿಸಿದರು.

ನಿರ್ದೇಶಕ ಟಾಡ್ ಫಿಲಿಪ್ಸ್ ನಾಯಕ ಜೋಕ್ವಿನ್ ಫೀನಿಕ್ಸ್ ಅವರೊಂದಿಗೆ ಜೋಕರ್ 2 ಸೀಕ್ವೆಲ್‌ ಶುರು ಮಾಡಿದ್ದಾರೆ. ಇದೀಗ ಜೋಕರ್ 2 ಚಿತ್ರೀಕರಣ ಆರಂಭವಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಚಿತ್ರೀಕರಣದ ಸ್ಟಿಲ್ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೋಕರ್ ಚಿತ್ರದ ಮುಂದುವರಿದ ಭಾಗವಾಗಿ ಚಿತ್ರ ತಯಾರಾಗುತ್ತಿದ್ದು, ‘ಜೋಕರ್: ಫಾಲಿ ಎ ಡೀಕ್ಸ್’ ಎಂದು ಶೀರ್ಷಿಕೆ ಇಡಲಾಗಿದೆ.

ಈ ಜೋಕರ್ 2 ಸಿನಿಮಾ 2024ರಲ್ಲಿ ಬಿಡುಗಡೆಯಾಗಲಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಜೋಕರ್ ಸಿನಿಮಾದ ಅಭಿಮಾನಿಗಳು ಈ ಸೀಕ್ವೆಲ್ ಸಿನಿಮಾಗಾಗಿ ಕಾಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!