ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಐದು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಜೋಶ್ ಇಂಗ್ಲಿಸ್ ಸ್ಫೋಟಕ ಶತಕದ ನೆರವಿನಿಂದ ಟೀಮ್ ಇಂಡಿಯಾಗೆ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತು. ಈ ಮೂಲಕ ಭಾರತದ ಗೆಲುವಿಗೆ 209ರನ್ಗಳ ಬೃಹತ್ ಗುರಿಯನ್ನು ನೀಡಿದೆ.
ಆಸೀಸ್ ಪಡೆ ಕೇವಲ 31 ರನ್ಗೆ ಮ್ಯಾಥೀವ್ ಶಾರ್ಟ್ (13) ವಿಕೆಟ್ ಕಳೆದುಕೊಳ್ಳುವ ಮೂಲಕ ಆರಂಭಿಕ ಆಘಾತಕ್ಕೆ ಒಳಗಾಗದರೂ ಕೂಡ ನಂತರ ಕ್ರೀಸ್ಗೆ ಅಂಟಿಕೊಂಡ ಸ್ಟೀವ್ ಸ್ಮಿತ್ (53) ಮತ್ತು ಜೋಶ್ ಇಂಗ್ಲಿಷ್ (110) ಅವರ 130 ರನ್ಗಳ ಜತೆಯಾಟದೊಂದಿಗೆ ಬೃಹತ್ ಮೊತ್ತದ ಗುರಿಯ ಕಡೆಗೆ ಅದ್ಭುತ ಇನಿಂಗ್ಸ್ ಆಡಿದರು. ಸ್ಮಿತ್ ತಾಳ್ಮೆಯ ಆಟವಾಡಿದರೆ, ಅಬ್ಬರಿಸಿ ಬೊಬ್ಬಿರಿದ ಇಂಗ್ಲಿಸ್, ಕೇವಲ 50 ಎಸೆತಗಳಲ್ಲಿ 110 ರನ್ ಕಲೆಹಾಕುವ ಮೂಲಕ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದವರ ಸಾಲಿಗೆ ಸೇರಿದರು.
ಉಳಿದಂತೆ ಮಾರ್ಕಸ್ ಸ್ಟೋನಿಸ್ (7*) ಮತ್ತು ಟಿಮ್ ಡೇವಿಡ್ (19*) ರನ್ ಗಳಿಸಿ ಅಜೇಯರಾಗಿ ಉಳಿದರು.