12 ದಿನದಲ್ಲಿ 5.4 ಸೆ.ಮೀ ಮುಳುಗಿದ ಜೋಶಿಮಠ : ಇಸ್ರೋದಿಂದ ಶಾಕಿಂಗ್ ರಿಪೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆಂ.ಮೀಟರ್‌ನಷ್ಟು ಮುಳುಗಿದೆ, ಭವಿಷ್ಯದಲ್ಲಿ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಇಸ್ರೋ ಮಾಹಿತಿ ನೀಡಿದೆ.

ಈ ಬಗ್ಗೆ ಇಸ್ರೋ ಅಧ್ಯಯನ ಕೈಗೊಂಡಿದ್ದು, ಸಂಸ್ಥೆಯ ದೂರಸಂವೇದಿ ಕೇಂದ್ರವು ಜೋಶಿಮಠ ನಗರದ ಉಪಗ್ರಹ ಚಿತ್ರಗಳನ್ನು ಬಿಡುಗಡೆ ಮಾಡಿದೆ. ನಿಧಾನವಾಗಿ ಭೂಮಿ ಹೇಗೆ ಮುಳುಗುತ್ತಿದೆ ಎಂಬುದನ್ನು ಚಿತ್ರಗಳಲ್ಲಿ ಕಾಣಬಹುದಾಗಿದೆ.

Joshimath At Risk Of Sinking Entirely, ISRO Makes Scary Revelation; See Satellite Imagesಡಿ.27ರಿಂದ ಜ.8ರವೆಗಿನ ಚಿತ್ರಗಳು ಇದಾಗಿದ್ದು, ಈ ಸಂದರ್ಭದಲ್ಲಿ ಭೂಮಿ 5.4 ಸೆಂ.ಮೀಟರ್‌ನಷ್ಟು ಕುಸಿದಿರುವುದು ಕಂಡು ಬಂದಿದೆ. ಆರ್ಮಿ ಹೆಲಿಪ್ಯಾಡ್ ಮತ್ತು ನರಸಿಂಗ್ ದೇಗುಲ ಸೇರಿದಂತೆ ಮಧ್ಯ ಜೋಶಿಮಠದಲ್ಲಿ ಸಬ್ಸಿಡೆನ್ಸ್ ಝೋನ್ ಇದೆ ಎಂದು ಚಿತ್ರಗಳು ತೋರಿಸುತ್ತಿದೆ.

ಜೋಶಿಮಠದಲ್ಲಿ ಈಗಾಗಲೇ ಚಮೋಲಿ ಜಿಲ್ಲಾಡಳಿತ ಭೂಕುಸಿತ ಪ್ರದೇಶ ಎಂದು ಘೋಷಿಸಿದೆ. ಇನ್ನು ಎರಡು ಹೊಟೇಲ್‌ಗಳನ್ನು ನೆಲಸಮಗೊಳಿಸಲು ಆರಂಭಿಸಿದ್ದು, ಹವಾಮಾನ ವೈಪರೀತ್ಯದಿಂದ ಹೊಟೇಲ್ ನೆಲಸಮ ಅರ್ಧಕ್ಕೇ ಸ್ಥಗಿತಗೊಳಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!