ಗಾಜಾದಲ್ಲಿ ಪತ್ರಕರ್ತರ ಸಾವಿನ ಸಂಖ್ಯೆ ಹೆಚ್ಚಳ: ವಿಶ್ವಸಂಸ್ಥೆ ಆತಂಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್-ಗಾಜಾ ನಡುವಿನ ಸಂಘರ್ಷದಲ್ಲಿ ಸಾಕಷ್ಟು ಪತ್ರಕರ್ತರು ಜೀವಬಿಟ್ಟಿದ್ದಾರೆ. ಅಲ್‌ಜಜೀರಾ ಪತ್ರಕರ್ತರು ಗಾಜಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ತನ್ನ ಇಬ್ಬರು ಪ್ಯಾಲೆಸ್ತೀನ್ ಪತ್ರಕರ್ತರನ್ನು ದಕ್ಷಿಣದ ನಗರದಲ್ಲಿ ಹತ್ಯೆ ಮಾಡಲಾಗಿದೆ. ಇದನ್ನು ಇಸ್ರೇಲಿಗಳು ಬೇಕಂತಲೇ ಮಾಡಿದ್ದಾರೆ ಎಂದು ಅಲ್ ಜಜೀರಾ ಹೇಳಿಕೊಂಡಿದೆ.

ಈ ಬಗ್ಗೆ ವಿಶ್ವಸಂಸ್ಥೆ ಮಾತನಾಡಿದ್ದು, ಈ ರೀತಿ ಪತ್ರಕರ್ತರ ಹತ್ಯೆ ಕಳವಳ ಉಂಟುಮಾಡಿದೆ ಎಂದು ಹೇಳಿದೆ. ಕಾರ್‌ನಲ್ಲಿ ಕುಳಿತಿದ್ದ ಪತ್ರಕರ್ತರ ಮೇಲೆ ದಾಳಿ ನಡೆದಿದ್ದು, ಹಮ್ಜಾ ವೇಲ್ ದಹದೌಹ್ ಮತ್ತು ಮುಸ್ತಫಾ ಅಬು ತುರಿಯಾ ಮೃತಪಟ್ಟಿದ್ದಾರೆ. ಈ ಹತ್ಯೆಗಳ ಬಗ್ಗೆ ಸ್ವತಂತ್ರವಾಗಿ ತನಿಖೆಯಾಗಬೇಕು, ಕ್ರಮ ಜರುಗಿಸಬೇಕು ಎಂದು ಹೇಳಿದೆ.

ವಿಡಿಯೋ ಪತ್ರಕರ್ತರಾದ ಇಬ್ಬರೂ ಕರ್ತವ್ಯಕ್ಕೆ ತೆರಳುವ ವೇಳೆ ಹತ್ಯೆಯಾಗಿದ್ದಾರೆ. ಕಾರಿನ ಮೇಲೆ ರಾಕೆಟ್ ದಾಳಿಯಾಗಿದೆ ಎಂದು ಹೇಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!