Friday, June 2, 2023

Latest Posts

ಪತ್ರಕರ್ತರ ಸಮ್ಮೇಳನ | ಕಲಬುರಗಿ ಭಾಗದ ಅಭಿವೃದ್ದಿಗೆ ಬದ್ದ: ಸಚಿವ ಮುರುಗೇಶ್ ನಿರಾಣಿ

ಹೊಸದಿಗಂತ ವರದಿ, ಕಲಬುರಗಿ

ಉದ್ಯಮಿ ಆಗೂ ಉದ್ಯೋಗ ನೀಡು ಕಾರ್ಯಕ್ರಮದ ಮೂಲಕ ಈ‌ ಭಾಗದ ಅಭಿವೃದ್ದಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಕೋವಿಡ್-19 ಮತ್ತು ನೆರೆ ಮೇಲುಸ್ತುವಾರಿ ಸಚಿವರಾದ ಮುರುಗೇಶ ಆರ್. ನಿರಾಣಿ ಹೇಳಿದರು.
36ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಅಂಗವಾಗಿ ಬ್ಯಾಂಡ್ ಕಲಬುರಗಿ (ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತು ಮಂಥನ) ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕಲಬುರಗಿಯ ಗೋವಾ ಹೊಟೇಲ್ ಹತ್ತಿರದ ಅಪ್ಪನ ಕೆರೆ ರಸ್ತೆಯ ಪೂಜ್ಯ ಶ್ರೀ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿತ್ತು.
ಈ ಭಾಗದ ಅಭಿವೃದ್ದಿಗೆ ರಾಜ್ಯ ಸರ್ಕಾರ ಬದ್ದವಾಗಿದೆ. ಈ‌ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಅಭಿವೃದ್ದಿಗೆ ಸರ್ವಪ್ರಯತ್ನ ಮಾಡಲಾಗುವುದು. ಬೃಹತ್ ಕೈಗಾರಿಕ‌ ಸಚಿವನಾಗಿ ನಾನು ಈ‌ ಭಾಗದ ಉದ್ಯೆಮಿಗಳಿಗೆ ಉದ್ಯಮ ಸ್ಥಾಪನೆಗೆ ಉತ್ತೇಜನ ನೀಡುತ್ತೇನೆ‌. ಸರ್ಕಾರ ನೀಡುವ ಸೌಲತ್ತುಗಳನ್ನು ಪಡೆದುಕೊಂಡು ಈ ಭಾಗದ ಅಭಿವೃದ್ದಿಗೆ ಅವರು ಕೈಜೋಡಿಸಲಿ ಎಂದರು.
ಬ್ರಾಂಡ್ ಕಲಬುರಗಿ ಹಿನ್ನೆಲೆಯಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹೆಸರು ಮಾಡಿದ ಕಲಬುರಗಿ ಮೂಲಕ ಹತ್ತು ಸಾಧಕರಿಗೆ ಸನ್ಮಾನ ಮಾಡಲಾಯಿತು. ಶರಣಬಸವೇಶ್ವರ ಸಂಸ್ಥಾನದ ಡಾ ಶರಣಬಸವಪ್ಪ ಅಪ್ಪಾ ಅವರ ಪರವಾಗಿ ಬಸವರಾಜ್ ದೇಶಮುಖ್, ಮತ್ಯಾನ ಬಬಲಾದದ ಡಾ ಗುರುಲಿಂಗೇಶ್ವರ ಸ್ವಾಮಿಜಿ, ಗುಲಬರ್ಗಾ ವಿವಿ ಯ ಕುಲಪತಿ ದಯಾನಂದ ಅಗಸರ, ದಾವಣಗೆರೆ ವಿವಿ ಉಪಕುಲಪತಿ ಡಾ ಎಸ್ ಎಸ್ ಹಲಸೆ, ಭೌತಶಾಸ್ತ್ರದಲ್ಲಿ ಸಾಧನೆ ಮಾಡಿದ ವಿಜ್ಞಾನ ಡಾ ಎಂ‌.ಎಸ್ ಜೋಗದ, ಉದ್ಯೆಮಿ ರಾಘವೇಂದ್ರ ಮೈಲಾಪುರ, ಖ್ಯಾತ ಚಾರ್ಟಡ್ ಅಕೌಂಟೆಂಟ್ ಪ್ರಶಾಂತ ಬಿಜಾಸ್ಪುರ, ತೊಗರಿ ಬೇಳೆ ಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ದ ಕೃಷಿ ವಿಜ್ಞಾನಿ ಡಾ ರಾಜು ತೆಗ್ಗೆಳ್ಳಿ, ರಾಷ್ಟ್ರಪಟ್ಟದ ಪ್ರಶಸ್ತಿ ಪ್ರಗತಿಪರ ರೈತ ಶರಣಬಸಪ್ಪ ಪಾಟೀಲ್ ತಾಜಸುಲ್ತಾನಪುರ ಹಾಗೂ ಕಳೆದ‌ ಐವತ್ತು ಐದು (೫೫) ವರ್ಷಗಳಿಂದ ಮಾಲ್ ಪುರಿ ಎನ್ನುವ ಸಿಹಿತಿನಿಸು ತಯಾರಿಕೆಯಲ್ಲಿ ಸಾಧನೆ ಮಾಡಿದ ಮಹಮ್ಮದ್ ರಫೀಕ್ ಅವರನ್ನು ಸನ್ಮಾನಿಸಲಾಯಿತು.
ಡಾ ಬಸವರಾಜ ಪಾಟೀಲ, ಅಧ್ಯಕ್ಷರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು‌ ಸಾಂಸ್ಕೃತಿಕ ಸಂಘ, ಮಾತಮಾಡಿ, ವಿವಿಧ ಕ್ಷೇತ್ರಗಳಲ್ಲಿ‌ ಸಾಧನೆ ಮಾಡಲು ಈ ಭಾಗದ ಯುವಕರು ಮುಂದೆ ಬರಬೇಕು. ಮುಂಬರುವ ಐದು ವರ್ಷಗಳಲ್ಲಿ ಬಸವಕಲ್ಯಾಣ ದಿಂದ ರಾಯಚೂರು ವರೆಗಿನ ಪ್ರದೇಶದಲ್ಲಿ ಸುಸಂಸ್ಕೃತ ವಾತವಾರಣ ನಿರ್ಮಾಣವಾಗಲಿದೆ. ಶರಣ ಹಾಗೂ ಸಂತರ ಮಾರ್ಗದರ್ಶನದಲ್ಲಿ ಈ ಭಾಗ ಬೆಳವಣಿಗೆಯಾಗಲಿದ್ದು ಇಡೀ ದೇಶಕ್ಕೆ ಬೆಳಕು ನೀಡುವ ನಾಡಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ ಬಸವರಾಜ ಪಾಟೀಲ ಸೇಡಂ, ಶಿವಾನಂದ ತಗಡೂರು, ಓಂಕಾರ ಕಾಕಡೆ, ರಾಮು ಪಾಟೀಲ್, ಶೇಷಮೂರ್ತಿ ಅವಧಾನಿ, ಹಣಮಂತರಾವ ಭೈರಾಮಡಗಿ, ಗಣೇಶ ಚಂದನಶಿವ ಅವರನ್ನು ಸನ್ಮಾನಿಸಲಾಯಿತು.
ನಾಟ್ಯಾಂಜಲಿ ಕಲಾ ಶಾಲೆಯ ಮಕ್ಕಳಿಂದ ಶಾಸ್ತ್ರೀಯ ಸಾಹಿತ್ಯದ ಭರತನಾಟ್ಯ ಹಾಗೂ ಮಾತೃ ಕಲಾ ಮಂದಿರದ ಬಾರಯ್ಯ ಬಾ ಜಾನಪದ ನೃತ್ಯ ಕಾರ್ಯಕ್ರಮ ನಡೆಯಿತು. ಹಾಗೂ ಹಿರಿಯ ಪತ್ರಕರ್ತ ರಾದ ಬಾಬುರಾವ ಯಡ್ರಾಮಿ ಪುತ್ರಿ ಪ್ರತಿಕ್ಷಾ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯ ಮೇಲೆ ಡಾ ಗುರುಪಾದಲಿಂಗೇಶ್ವರ ಸ್ವಾಮಿಗಳು ಬಬಲಾದ ಮಠ, ಡಾ ಬಸವರಾಜ ಪಾಟೀಲ ಸೇಡಂ, ಬಿ.ಗಣಪತಿ, ಶಿವಾನಂದ‌ ತಗಡೂರು, ಶೇಷಮೂರ್ತಿ ಅವಧಾನಿ, ಗಣೇಶ ಚಂದನಶಿವ, ಬಸವರಾಜ ದೇಶಮುಖ, ದಯಾನಂದ ಅಗಸರ, ಎಸ್ ಎಸ್ ಅಗಸೆ, ಎಂ ಎನ್ ಜೋಗದ, ರಾಘವೇಂದ್ರ ಮೈಲಾಪುರ, ಪ್ರಶಾಂತ ಬಿಜಾಸ್ಪುರ ಮತ್ತಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!