ಜೂ.29: ನ್ಯಾ. ಚಂದ್ರಶೇಖರಯ್ಯರಿಗೆ ಜೀವಮಾನ ಸಾಧನೆ ಅಭಿನಂದನಾ ಸಮಾರಂಭ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರಿಗೆ ಜೀವಮಾನ ಸಾಧನೆಯ ಅಭಿನಂದನಾ ಸಮಾರಂಭ ಹಾಗೂ ಹೆಮ್ಮೆಯ ಮಣ್ಣಿನ ಮಕ್ಕಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದೆ ಜೂನ್ 29 ರಂದು, ಸಂಜೆ 6 ಗಂಟೆಗೆ ಬೆಂಗಳೂರಿನ ಶ್ರೀ ಕೊಂಡಜ್ಜಿ ಬಸಪ್ಪ ಸಭಾಂಗಣ (ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣ), ಅರಮನೆ ರಸ್ತೆ, ಸಿಐಡಿ ಕೇಂದ್ರ ಕಚೇರಿ ಹತ್ತಿರ ಏರ್ಪಡಿಸಲಾಗಿದೆ.

ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ದಿನಾಂಕ ಜೂನ್ 29 ರಂದು ಕರ್ನಾಟಕ ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿಗಳು ಹಾಗೂ ಮಾಜಿ ಉಪಲೋಕಾಯುಕ್ತರಾದ ಶ್ರೀ ನ್ಯಾಯಮೂರ್ತಿ ಚಂದ್ರಶೇಖರಯ್ಯ ರವರಿಗೆ ಜೀವಮಾನ ಸಾಧನೆಯ ಅಭಿನಂದನಾ ಸಮಾರಂಭ, ಹಿರಿಯ ಅಧಿಕಾರಿಗಳಾದ ಶ್ರೀ ಪ್ರದೀಪ್ ಪ್ರಭಾಕರವರಿಗೆ, ಮಂಜುಶ್ರೀ ರವರಿಗೆ ಸಾಧನೆಯ ಪುರಸ್ಕಾರ ಹಾಗೂ UPSC ನಲ್ಲಿ ಉತ್ತಿರ್ಣರಾದ ಹೆಮ್ಮೆಯ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನ್ಯಾಯಮೂರ್ತಿ ಶಿವಶಂಕರೇಗೌಡರವರು ನೆರೆವೇರಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸದಾನಂದಗೌಡರು ವಹಿಸಿಕೊಳ್ಳಲಿದ್ದಾರೆ, ಮುಖ್ಯ ಅತಿಥಿಗಳಾಗಿ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣಬೈರೇಗೌಡರು, ವಿಧಾನಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ CT ರವಿ ಯವರು ಭಾಗವಹಿಸಿಲಿದ್ದಾರೆ.

ಈ ಕಾರ್ಯಕ್ರಮವನ್ನು ಒಕ್ಕಲಿಗ ಯುವ ಬ್ರಿಗೇಡ್ ಸೇವಾ ಸಂಸ್ಥೆ ಆಯೋಜಿಸಿದ್ದು, ಸುಮಾರು 21 ದೇಶಗಳಲ್ಲಿ ಸಮುದಾಯದ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡುವುದು ಹಾಗೂ ಉದ್ಯೋಗ ಕೊಡಿಸುವ ಕಾರ್ಯವನ್ನು ಪ್ರಪಂಚಾದ್ಯಂತ ಮಾಡುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!