ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಜೂ.ಎನ್‌ಟಿಆರ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ನಟ ಜೂ.ಎನ್‌ಟಿಆರ್ ಅವರು ಇಂದು ಕೊಲ್ಲೂರು ಮೂಕಾಂಬಿಕೆ ದೇವಿಯ ದರುಶನ ಪಡೆದರು.

ಕರಾವಳಿ ಜಿಲ್ಲೆ ಉಡುಪಿ ಎರಡನೇ ದಿನದ ಪ್ರವಾಸದಲ್ಲಿರುವ ತಾರಕ್ ರಾಮ್ ಮಧ್ಯಾಹ್ನ ಮಹಾಪೂಜೆ ಸಂದರ್ಭಗಳಲ್ಲಿ ದೇವಸ್ಥಾನಕ್ಕೆ ಆಗಮಿಸಿ ತಾಯಿ ಕೊಲ್ಲೂರಮ್ಮನ ದರುಶನ ಮಾಡಿದ್ದಾರೆ.

ನಟ, ನಿರ್ದೇಶಕ ರಿಷಬ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್ ಕುಟುಂಬವೂ ಜೊತೆಯಾಯಿತು. ಲಾಫಿಂಗ್ ಬುದ್ಧ ನಟ ಪ್ರಮೋದ್ ಶೆಟ್ಟಿ ಸಹ ಜೊತೆಗೆ ಬಂದು ದೇವರ ದರುಶನ ಮಾಡಿದರು.

ನಾಲ್ಕು ದಶಕದ ನಂತರ ಜೂ.ಎನ್‌ಟಿಆರ್ ತಾಯಿ ಶಾಲಿನಿ ನಂದಮೂರಿ ಕರಾವಳಿಗೆ ಬಂದಿದ್ದಾರೆ. ಪತ್ನಿ ಲಕ್ಷ್ಮಿ ಪ್ರಣತಿ, ಪ್ರಗತಿ ರಿಷಬ್, ಪ್ರಶಾಂತ್ ನೀಲ್, ಲಿಖಿತಾ ನೀಲ್ ಮೂಕಾಂಬಿಕೆಯ ದರುಶನ ಮಾಡಿ ಪ್ರಾಂಗಣದಲ್ಲಿರುವ ಗುಡಿಗಳಿಗೆ ಭೇಟಿ ಕೊಟ್ಟು ಪ್ರಸಾದ ಸ್ವೀಕರಿಸಿದರು. ಕೊಲ್ಲೂರು ಆಡಳಿತದಿಂದ ನಟರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜೂ.ಎನ್‌ಟಿಆರ, ಕೊಲ್ಲೂರು ದೇವಿಯ ದರುಶನ ತುಂಬಾ ಚೆನ್ನಾಗಿ ಆಯಿತು. ದರುಶನ ಮಾಡಿಸಿದ್ದಕ್ಕೆ ರಿಷಬ್‌ಗೆ ತುಂಬಾ ಧನ್ಯವಾದ. ಮುಂದಿನ ಸಿನಿಮಾ ದೇವರ ಬಗ್ಗೆ ದೇವಸ್ಥಾನದಲ್ಲಿ ನಾನು ಏನು ಮಾತನಾಡುವುದಿಲ್ಲ. ದೇಗುಲ ಭೇಟಿ ಬಿಟ್ಟು ದೇವಸ್ಥಾನದಲ್ಲಿ ಬೇರೇನೂ ವಿಚಾರ ಮಾತನಾಡಲು ನಾನು ಬಯಸುವುದಿಲ್ಲ ಎಂದರು.

ರಿಷಬ್ ಜೊತೆ ಗೆಳೆತನ ಓಡಾಟ ಮಾಡುತ್ತಿರೋದರಿಂದ ಕಾಂತಾರ ಫ್ರೀಕ್ವೆಲ್‌ನಲ್ಲಿ ತಾರಕ್ ನಟಿಸುತ್ತಾರಾ ಎಂಬ ಪ್ರಶ್ನೆ ಓಡಾಡುತ್ತಿದೆ. ಇದಕ್ಕೆ ಉತ್ತರಿಸಿದ ಅವರು, ರಿಷಬ್ ಶೆಟ್ಟಿ ಅವರೇ ಈ ಬಗ್ಗೆ ಪ್ಲಾನ್ ಮಾಡಬೇಕು. ಅವರು ಏನು ಪ್ಲಾನ್ ಮಾಡಿದರೂ ನಾನು ರೆಡಿ ಎಂದರು. ದೇವಸ್ಥಾನದಲ್ಲಿ ಆ ವಿಚಾರ ನಾನು ಮಾತನಾಡುವುದಿಲ್ಲ. ಪ್ರಮೋದ್ ಶೆಟ್ಟಿ ನಟನೆಯ ಲಾಫಿಂಗ್ ಬುದ್ಧ ಸಿನಿಮಾ ನೋಡುತ್ತೇನೆ. ಲಾಫಿಂಗ್ ಬುದ್ಧ ಯಶಸ್ಸಿಗೆ ಪ್ರಮೋದ್ ಶೆಟ್ಟಿಗೆ ರಿಷಬ್ ಅಭಿನಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!