ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಹೊರವಲಯದಲ್ಲಿ ಕಾಡಾನೆ ಬೀಟಮ್ಮ ಹಾಗೂ ಗ್ಯಾಂಗ್ ಎಲ್ಲೆಡೆ ಭೀತಿ ಸೃಷ್ಟಿಮಾಡಿದೆ. ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಓಡಿಸಲು ಅಭಿಮನ್ಯು ನೃತೃತ್ವದ ತಂಡ ಅಖಾಡಕ್ಕಿಳಿದಿದೆ.
ಆಂಬರ್ ವ್ಯಾಲಿ ಶಾಲಾ ಆವರಣದಲ್ಲಿ 30 ಕಾಡಾನೆಗಳು ಕಾಣಿಸಿಕೊಂಡಿದ್ದು, ಶಾಲೆಯ ಆವರಣದಿಂದ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಿದ್ದರು. ಆದರೆ ಅವುಗಳನ್ನು ಕಾಡಿಗೆ ಸೇರಿಸದೆ ಜನ ನೆಮ್ಮದಿಯಾಗಿರಲು ಸಾಧ್ಯವಾಗುವುದಿಲ್ಲ.
ಇದೇ ಕಾರಣಕ್ಕಾಗಿ ಅಭಿಮನ್ಯ ಆಂಡ್ ಟೀಂ ಅಖಾಡಕ್ಕಿಳಿದಿದ್ದು, ಕಾರ್ಯಾಚರಣೆ ನಡೆಸಲಿವೆ.
ಅಭಿಮನ್ಯು ಟೀಂನಲ್ಲಿ ಮಹೇಂದ್ರ, ಸುಗ್ರೀವ, ಭೀಮ, ದುಬಾರೆ ಹಾಗೂ ನಾಗರಹೊಳೆಯಿಂದ ಆಗಮಿಸಿರುವ ಎಂಟು ಆನೆಗಳಿವೆ.
ಮಧ್ಯಾಹ್ನದ ನಂತರ ಕಾರ್ಯಾಚರಣೆ ಆರಂಭವಾಗಲಿದೆ. ಬಂದ ದಾರಿಯಲ್ಲೇ ಅವುಗಳನ್ನು ಅರಣ್ಯಕ್ಕೆ ಓಡಿಸುವುದು ಸದ್ಯದ ಪ್ಲಾನ್ ಆಗಿದೆ. ಇದೀಗ ಕೆಆರ್ ಪೇಟೆ ಗ್ರಾಮದ ಶಾಲೆಯೊಂದರ ಹಿಂಭಾಗದ ಪ್ಲಾಂಟೇಷನ್‌ನಲ್ಲಿ ಬೀಟಮ್ಮ ಆಂಡ್ ಗ್ಯಾಂಗ್ ಇದೆ.