ಅದ್ದೂರಿ ಮದುವೆಯ ನಡುವೆ ಇಲ್ಲಿ ನಡೆಯಿತು ಬರೀ 1 ರೂಪಾಯಿ ವಿವಾಹ: ದಾಖಲೆ ಜೊತೆ ಮೆಸೇಜ್ ಕೊಟ್ರು ವೈದ್ಯ ದಂಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚಿನ ದಿನಗಳಲ್ಲಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆಯಾಗುತ್ತಾರೆ. ಕೆಲವರು ದುಡ್ಡು ಇರೋರು, ಇಲ್ಲದವರೂ ಸಹ ಮದುವೆ ಒಮ್ಮೆಯೇ ಮಾಡೋದು ಅಂತ ಸಾಲ ಸೋಲ ಮಾಡಿಯಾದ್ರೂ ತಕ್ಕಮಟ್ಟಿಗೆ ಅದ್ಧೂರಿತನ ತೋರಿಸುತ್ತಾರೆ. ಆದರೇ, ಇಲ್ಲೊಂದು ಜೋಡಿ ಹೊಸ ದಾಖಲೆಯೊಂದಿಗೆ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದೆ.

ಹರಿಯಾಣದ ಚಕ್ರಿ ನಿವಾಸಿ ಡಾ. ರಮೇಶ್​ ರೋಹಿಲಾ ಹಾಗೂ ಭಿವಾನಿ ನಿವಾಸಿ ಡಾ. ಅರುಣಾ ಹೊಸ ದಾಖಲೆಯನ್ನೇ ಬರೆದಿದ್ದಾರೆ. ಪರಸ್ಪರ ಒಪ್ಪಿಕೊಂಡು, ಪ್ರೀತಿಸಿದ್ದ ಜೋಡಿ ಕೇವಲ ಒಂದೇ ಒಂದು ರೂಪಾಯಿಗೆ ಮದುವೆ ಆಗಿ ಹೊಸ ದಾಖಲೆ ಬರೆದಿದ್ದಾರೆ.

ಬಡತನದ ಮಧ್ಯೆಯೇ ಬೆಳೆದ ಅರುಣಾ ಬಾಲ್ಯದಿಂದ್ಲೂ ಒಂದೇ ನಿರ್ಧಾರದಲ್ಲಿದ್ದರು. ಯಾರು ವರದಕ್ಷಿಣೆ ಕೇಳೋದಿಲ್ಲವೋ? ಅವನೇ ಅಸಲಿ ಗಂಡಸು. ಅಂಥಾ ಹುಡುಗನನ್ನೇ ಹುಡುಕಿ ಮದುವೆ ಆಗೋದು ಅಂತ ಕನಸು ಕಂಡಿದ್ದಳು. ಅಂತೆಯೇ ಮೆಡಿಕಲ್ ಓದುವಾಗ ಸಿಕ್ಕ ಹುಡುಗನೇ ಡಾ. ರಮೇಶ್​​. ಸದ್ಯ, ರಮೇಶ್ ಅರುಣಾ ಬರೀ ಒಂದು ರೂಪಾಯಿಗೆ ಮದುವೆ ಆಗಿ ಬಹುದೊಡ್ಡ ಮಸೇಜ್ ನೀಡಿದ್ದಾರೆ.

ಬಡ ರೈತ ಸಂತೋಷ್​​ರ ಮಗಳಾದ ಅರುಣಾ, “ಅಪ್ಪಾ ಮದುವೆ ಆಗ್ತೀನಿ. ಇದೇ ಹುಡುಗನೇ ವರ” ಅಂತ ಹೇಳಿದಾಗ ಅಪ್ಪ ಹೇಳಿದ್ದು ಒಂದೇ ಮಾತು. ನೋಡಿ ರಮೇಶ್​​ ನನ್ನ ಬಳಿ ಹಣವಿಲ್ಲ. ನಾನೊಬ್ಬ ಬಡ ರೈತ ಅಂತ ಬಿಕ್ಕಳಿಸಿದ್ದರು. ಆದರೇ, ರಮೇಶ್​ ಪೋಷಕರು ನಮಗೆ ನಿಮ್ಮಿಂದ ಒಂದು ನಯಾಪೈಸೆಯೂ ಬೇಕಿಲ್ಲ ಅಂದಿದ್ರು. ಅತ್ಯಂತ ಸರಳವಾಗಿ ಮನೆಯಲ್ಲೇ ಮದುವೆ ಆದ ಜೋಡಿ ತಮ್ಮ ತಮ್ಮ ಬಟ್ಟೆಗಳಿಗೆ ತಾವೇ ಖರ್ಚು ಮಾಡಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ್ರೂ ಅದ್ಧೂರಿಯಾಗಿ ಹಣ ಪೋಲು ಮಾಡಿಲ್ಲ. ಪ್ರೀತಿಯಿಂದ ಮುಯ್ಯಿ ಅಂತ ಮಾವ ಸಂತೋಷ್​​ ಕೊಟ್ಟ ₹1 ರೂಪಾಯಿ ಅಷ್ಟೇ ಖರ್ಚಾಗಿದೆ. ಮಗಳ ಶಿಕ್ಷಣಕ್ಕಾಗಿ ಖರ್ಚು ಮಾಡಿದ್ದೀನಿ. ನನ್ನ ಬಳಿ ಹಣವಿಲ್ಲ. ಆದರೇ, 50 ಕೆಜಿ ಬಂಗಾರದ ಮಗಳನ್ನೇ ಕೊಡ್ತಿದ್ದೀನಿ ಅನ್ನೋ ಮೂಲಕ ಭಾವುಕರಾದ್ರು ಎನ್ನಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here