ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲ ದಿನಗಳಿಂದ ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ , ಪತ್ನಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆಯಲು ನಿರ್ಧರಿಸಿದ್ದು, ಶೀಘ್ರದಲ್ಲೇ ಸೆಲೆಬ್ರಿಟಿ ದಂಪತಿಗಳು ಬೇರ್ಪಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಾಗ್ಯೂ ಈ ಬಗ್ಗೆ ಚಹಲ್ ಆಗಲಿ, ಧನಶ್ರೀ ವರ್ಮಾ ಅವರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.
ಇದೀಗ ಈ ವದಂತಿ ನಡುವೆಯೇ ಧನಶ್ರೀ ವರ್ಮಾ ಅವರಿಂದ ವಿಚ್ಚೇಧನ ಪಡೆಯಲು ಯುಜ್ವೇಂದ್ರ ಚಹಲ್ 60 ಕೋಟಿ ರೂ. ಜೀವನಾಂಶ ನೀಡಲಿದ್ದಾರೆ ಎಂದು ವರದಿಯಾಗಿದೆ.
ಸ್ಟಾರ್ ದಂಪತಿಗಳ ನಡುವೆ ಈಗಾಗಲೇ ಮಾತುಕತೆ ನಡೆದಿದ್ದು, ಅದರಂತೆ ಯುಜ್ವೇಂದ್ರ ಚಹಲ್ ಅವರು ಧನಶ್ರೀ ವರ್ಮಾಗೆ 60 ಕೋಟಿ ರೂ. ಜೀವನಾಂಶ ನೀಡಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಆದರೆ ಈ ಸುದ್ದಿಯನ್ನು ಚಹಲ್ ಈವರೆಗೆ ಖಚಿತಪಡಿಸಿಲ್ಲ. ಅತ್ತ ಇಂತಹದೊಂದು ಸುದ್ದಿಗೆ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆಯನ್ನು ಸಹ ನೀಡಿಲ್ಲ.
ಇದಕ್ಕೂ ಮುನ್ನ ವಿಚ್ಛೇದನ ವದಂತಿ ನಡುವೆ ಧನಶ್ರೀ ವರ್ಮಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದರು. ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ ಕೆಲ ದಿನಗಳು ತುಂಬಾ ಕಠಿಣ ದಿನಗಳಾಗಿವೆ. ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷವನ್ನು ಹರಡುವ ಟ್ರೋಲ್‌ಗಳಿಂದ ನನ್ನ ಗೌರವವನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.ಈ ಹೆಸರುಗಳಿಸಲು ಮತ್ತು ಖ್ಯಾತಿಯನ್ನು ಪಡೆಯಲು ನಾನು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ನನ್ನ ಮೌನ ನನ್ನ ದೌರ್ಬಲ್ಯವಲ್ಲ. ಅದು ನನ್ನ ಶಕ್ತಿ. ನಕಾರಾತ್ಮಕತೆಯು ಆನ್‌ಲೈನ್‌ನಲ್ಲಿ ಸುಲಭವಾಗಿ ಹರಡುತ್ತದೆ. ಇದು ಇತರರನ್ನು ಮೇಲಕ್ಕೆತ್ತಲು ಧೈರ್ಯ ನೀಡುತ್ತದೆ.ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಪುರಾವೆಗಳಿಲ್ಲದಿದ್ದರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾ ಎಂದು ಧನಶ್ರೀ ವರ್ಮಾ ಬರೆದುಕೊಂಡಿದ್ದರು.