ಶಾಲೆಗಳನ್ನು ಗುರಿಯಾಗಿಸಿ ಮೂರು ಕಡೆ ಸ್ಪೋಟ, 6 ವಿದ್ಯಾರ್ಥಿಗಳ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಫ್ಘಾನಿಸ್ತಾನದ ಶಾಲೆಗಳಲ್ಲಿ ಬಾಂಬ್‌ ಸ್ಪೋಟ ಉಂಟಾಗಿದೆ. ಇಂದು ಮೂರು ಕಡೆ ಸ್ಪೋಟಗೊಂಡಿದ್ದು, ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 6ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಆಫ್ಘಾನಿಸ್ತಾನದ ಭದ್ರತಾ ಮತ್ತು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಕಾಬೂಲ್‌ನ ಮುಮ್ತಾಜ್ ಶಾಲೆಯಲ್ಲಿ ಮೊದಲ ಸ್ಫೋಟ ಸಂಭವಿಸಿದೆ. ರಾಜಧಾನಿಯ ದಶ್ತ್-ಎ-ಬರ್ಚಿ ಜಿಲ್ಲೆಯ ಶಾಲೆಯೊಂದರ ಬಳಿ ಎರಡನೇ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ 14ಮಂದಿ ಗಾಯಗೊಂಡಿದ್ದಾರೆ ಎಂದರು ಆಸ್ಪತ್ರೆಯ ನರ್ಸಿಂಗ್ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಫೋಟ ನಡೆದ ಪ್ರದೇಶದಲ್ಲಿ ಶಿಯಾ ಹಜಾರಾ ಸಮುದಾಯದ ಅನೇಕ ನಿವಾಸಿಗಳು ಇದ್ದರು. ಇಸ್ಲಾಮಿಕ್ ಸ್ಟೇಟ್ ಸೇರಿದಂತೆ ಸುನ್ನಿ ಉಗ್ರಗಾಮಿ ಗುಂಪುಗಳು ಅವರ ಮೇಲೆ ಆಗಾಗ್ಗೆ ದಾಳಿ ಮಾಡುತ್ತವೆ ಎಂದು ಕಾಬೂಲ್ ಕಮಾಂಡರ್ ವಕ್ತಾರ ಖಾಲಿದ್ ಜದ್ರಾನ್ ಅವರು ತಿಳಿಸಿದ್ದಾರೆ. ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಸರಣಿ ಬಾಂಬ್ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!