ಕಚ್ಚತೀವು ದ್ವೀಪ ವಿಚಾರ ಮುಗಿದು ಹೋದ ಅಧ್ಯಾಯ: ಕಾಂಗ್ರೆಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಚ್ಚತೀವು ದ್ವೀಪ ವಿಚಾರ ವಿವಿಧ ರೂಪ ಪಡೆಯುತ್ತಿದ್ದು, ಇತ್ತ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರೆ, ಅತ್ತ ಇದು ಮುಗಿದು ಹೋದ ಅಧ್ಯಾಯ.ಎಂದು ಕಾಂಗ್ರೆಸ್‌ ನಾಯಕ ಚಿದಂಬರಂ ಹೇಳಿದ್ದಾರೆ.

ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿಮಾತನಾಡಿದ ಅವರು, ಗಡಿಯಲ್ಲಿ ಭಾರತದ ಭೂಪ್ರದೇಶಗಳನ್ನು ಚೀನಾ ಆಕ್ರಮಿಸಿಕೊಳ್ಳುತ್ತಿದ್ದು ದೇಶದ ಜನರ ಗಮನ ಬೇರೆಡೆಗೆ ಸೆಳೆಯಲು ಬಿಜೆಪಿ ಕಚ್ಚತೀವು ದ್ವೀಪದ ವಿಷಯವನ್ನು ಚುನಾವಣೆ ಕಾರಣಗಳಿಗೆ ಎತ್ತುತ್ತಿದೆ ಎಂದು ಚಿದಂಬರಂ ಹೇಳಿದರು.

ಈ ವಿಷಯ ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯ ಹಾಗೂ ಅಲ್ಲಿನ ತಮಿಳು ಭಾಷಿಕರ ಮೇಲೂ ಗಂಭೀರ ಪರಿಣಾಮ ಬೀರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಚ್ಚತೀವು ದ್ವೀಪದ ವಿಷಯ ಮುಗಿದು ಹೋದ ಅಧ್ಯಾಯವಾಗಿದೆ. 50 ವರ್ಷಗಳ ಹಿಂದೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಧಾನಿ ಮೋದಿ 2014ರಿಂದ ಅಧಿಕಾರದಲ್ಲಿದ್ದಾರೆ. ಕಳೆದ 10 ವರ್ಷಗಳಲ್ಲಿ ಅವರು ಈ ವಿಷಯವನ್ನು ಏಕೆ ಎತ್ತಲಿಲ್ಲ? ಎಂದು ಪ್ರಶ್ನೆ ಮಾಡಿದರು.

ಲಂಕಾದಲ್ಲಿರುವ ತಮಿಳು ಭಾಷಿಕರ ಮೇಲೆ ಗಂಭೀರ ಪರಿಣಾಮಗಳಾಗಲಿವೆ ಎಂಬುದು ಮೋದಿ ಮತ್ತು ಮಂತ್ರಿಗಳಿಗೆ ಗೊತ್ತಿದ್ದರೂ ಅವರು ಈ ವಿಷಯವನ್ನು ಪ್ರಸ್ತಾಪ ಮಾಡಿದ್ದು ಖಂಡನೀಯ ಎಂದು ಚಿದಂಬರಂ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!