ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಫಿ ವಿತ್ ಕರಣ್ ಶೋನಲ್ಲಿ ಈ ಬಾರಿ ರಾಣಿಮುಖರ್ಜಿ ಹಾಗೂ ಕಾಜೋಲ್ ಆಗಮಿಸಿದ್ದಾರೆ.ಕಾಜೋಲ್ ಹಾಗೂ ಕರಣ್ ಜೋಹರ್ ದಶಕಗಳಿಂದ ಸ್ನೇಹಿತರಾಗಿದ್ದಾರೆ. ಆದರೆ ಶೋನಲ್ಲಿ ಇಬ್ಬರ ಮಧ್ಯೆ ವಾಗ್ವಾದವಾಗಿದೆ. ಇದಕ್ಕೆ ಕಾರಣ ರಣ್‌ವೀರ್ ಸಿಂಗ್.
ಹೌದು, ಕಾಫಿ ವಿತ್ ಕರಣ್ ಶೂಟಿಂಗ್ ಮಧ್ಯದಲ್ಲಿ ಕರಣ್‌ಗೆ ರಣ್‌ವೀರ್ ಕರೆ ಮಾಡಿದ್ದಾರೆ. ಶೋ ನಡೆಸುವ ಬದಲು ಕರಣ್ ರಣ್‌ವೀರ್ ಜೊತೆ ಗಂಟೆಗಟ್ಟಲೆ ಮಾತನಾಡಿದ್ದಾರೆ.
ಅಲ್ಲೇ ಕುಳಿತಿದ್ದ ಕಾಜೋಲ್ ಹಾಗೂ ರಾಣಿಗೆ ಇದು ಇಷ್ಟವಾಗಿಲ್ಲ. ಶೂಟ್‌ಗೆ ಕರೆಸಿ ಪರ್ಸನಲ್ ರೀಸನ್‌ಗೆ ಕಾಯಿಸುವುದು ತಪ್ಪು ಎಂದು ಕಾಜಲ್ ಕರಣ್‌ಗೆ ಹೇಳಿದ್ದಾರೆ. ಇದು ಅನ್‌ಪ್ರೊಫೆಶನಲ್ ನಡೆ ಎಂದು ರೇಗಿದ್ದಾರೆ ಎನ್ನಲಾಗಿದೆ.