ಹೊಸದಿಗಂತ, ಕಲಬುರಗಿ:
ಇದೇ ಮುಂಬರುವ ಫೆಬ್ರವರಿ 22ರಿಂದ ಕಲಬುರಗಿ ಹಾಗೂ ಬೆಂಗಳೂರಿನ ನುಡುವಿನ ರಾತ್ರಿ ವಿಮಾನಯಾನ ಸೇವೆ ಆರಂಭವಾಗಲಿದೆ ಎಂದು ಕಲಬುರಗಿ ಸಂಸದ ಡಾಕ್ಟರ್ ಉಮೇಶ್ ಜಾಧವ್ ತಿಳಿಸಿದ್ದಾರೆ.
ಶುಕ್ರವಾರ ಅವರು ನವದೆಹಲಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು,ಫೆ. 22 ರಂದು ಅಲೈನ್ಸ್ ಏರ್ಲೈನ್ಸ್ ರವರಿಂದ ಸಾಯಂಕಾಲ 6:45 ಗಂಟೆ ಬೆಂಗಳೂರಿನಿಂದ ಹೊರಟು ರಾತ್ರಿ 08:00 ಗಂಟೆ ಕಲಬುರಗಿ ಬರಲಿದೆ. ಇದೇ ವಿಮಾನ ರಾತ್ರಿ 08:45 ಗಂಟೆಗೆ ಕಲಬುರಗಿಯಿಂದ ಹೊರಟು ಬೆಂಗಳೂರಿಗೆ ರಾತ್ರಿ 10:00 ತಲುಪಲಿದೆ ಎಂದು ತಿಳಿಸಿದರು.
22ರಂದು ಅಲೈನ್ಸ್ ಏರ್ಲೈನ್ಸ್ ನವರು ಪ್ರಯೋಗಿಕವಾಗಿ ಪ್ರತಿ ಗುರುವಾರ ರಾತ್ರಿ ವಿಮಾನ ಸೇವೆ ಪ್ರಾರಂಭ ಮಾಡಲಿದ್ದಾರೆ. ಹಾಗೆಯೇ ಮುಂಬರುವ ದಿನಗಳಲ್ಲಿ ಪ್ರತಿದಿನ ಸೇವೆ ಪ್ರಾರಂಭವಾಗಲಿದೆ.
ಕಲ್ಬುರ್ಗಿಯಿಂದ ರಾತ್ರಿ ಸೇವೆ ಪ್ರಾರಂಭವಾಗಬೇಕೆಂದು ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಹೇಳಿದರು.
ದೇಶದ ವಿವಿಧಡೆ ವಿಮಾನಯಾನ ಆರಂಭಿಸುವ ನಿಟ್ಟಿನಲ್ಲಿ ಇದೊಂದು ಮೈಲಿಗಲ್ಲು ಸಾಬೀತು ಆಗಲಿದೆ ಎಂದು ನಾನು ಭಾವಿಸಿದ್ದೇನೆ, ಇದೇ ನಿಟ್ಟಿನಲ್ಲಿ ಈಗಾಗಲೇ ಇಂಡಿಗೋ ಏರ್ಲೈನ್ಸ್ ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ಸೇವೆ ಪ್ರಾರಂಭಿಸುವ ಮಾತುಕತೆ ಕೊನೆಯ ಹಂತದಲ್ಲಿ ಇದ್ದು, ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ನಾಗರಿಕ ವಿಮಾನಯಾನ್ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ರವರನ್ನು ಧನ್ಯವಾದಗಳು ಕೋರುತ್ತೇನೆ ಎಂದು ಸಂಸದ ಡಾಕ್ಟರ್ ಉಮೇಶ್ ಜಾಧವ್ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.