ಹೊಸದಿಗಂತ ವರದಿ, ಕಲಬುರಗಿ
ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವರಾಧನೆ ನಿಮಿತ್ಯ ಜಯತೀರ್ಥ ನಗರದ ಹಂಸ ನಾಮಕ ಮತ್ತು ಲಕ್ಷ್ಮೀನಾರಾಯಣ ಪಾರಾಯಣ ಸಂಘ ವತಿಯಿಂದ 108 ಬಾರಿ ರಾಯರ ಅಷ್ಟೋತ್ತರ ಜರುಗಿತು.
ಈ ಸಂದರ್ಭದಲ್ಲಿ ಪಾರಾಯಣದ ಸಂಚಾಲಕ ರವಿ ಲಾತೂರಕರ ಮಾತನಾಡಿ, ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಘರ್ ಘರ್ ಮೆ ತಿರಂಗಾ ಎಂದು ಕರೆ ಕೊಟ್ಟಿದ್ದಾರೆ. ಮತ್ತು ಕಲಬುರಗಿ ದಕ್ಷಿಣದ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ 12000 ಧ್ವಜ ವಿತರಿಸುತ್ತಿದ್ದಾರೆ. ಹೀಗಾಗಿ ಇದರ ಪ್ರಾರಂಭವನ್ನು ದೇವರ ಸನ್ನಿಧಿಯಲ್ಲಿ ಶುರು ಆರಂಭ ಮಾಡಿದ್ದೆವೆ ಎಂದರು.
50 ಧ್ವಜ ರಾಯರಿಗೆ ಸಮರ್ಪಿಸಿ ಪಾರಾಯಣ ಸಂಘದವರಿಗೆ ವಿತರಿಸಲಾಯಿತು. ಮತ್ತು ಮನೆಯಲ್ಲಿ ಮಕ್ಕಳಿಂದ ಕಟ್ಟಿಸಿ ಅವರಿಗೂ ರಾಷ್ಟ್ರ ಧ್ವಜ ಮತ್ತು ದೇಶ ಭಕ್ತಿ ಬಗ್ಗೆ ಅರಿವು ಮೂಡಿಸಿ ನಮ್ಮ ಮುಂದಿನ ಜನಾಂಗಕ್ಕೆ ದೇಶ ಪ್ರೇಮ ಮೂಡುವ ಹಾಗೆ ನಾವು ಮಾಡೋಣ ಎಂದು ಹೇಳಿದ ಅವರು, 75 ವರ್ಷಗಳ ನಂತರ ಪ್ರಧಾನ ಮಂತ್ರಿಗಳಿಂದ ಇಂತಹ ದೊಡ್ಡ ಕಾರ್ಯ ನಡೆಯುತ್ತಿದ್ದು, ಎಲ್ಲರೂ ಕೈ ಜೋಡಿಸೋಣ ಹೊಸ ರಾಷ್ಟ್ರ ಕಟ್ಟೋಣ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ರವಿ ಲಾತೂರಕರ, ರಾಮಾಚಾರ್ಯ ಜೋಷಿ, ಕೆ.ಬಿ. ಕುಲಕರ್ಣಿ,ಅನಿಲ್ ಕುಲಕರ್ಣಿ,ಸುರೇಶ್ ಕುಲಕರ್ಣಿ,ಧಾನೇಶ್,ನರಸಿಂಗ ರಾವ್, ಗುಂಡೆ ರಾವ್ ಕುಲಕರ್ಣಿ,ಪ್ರಾಣೇಶ್ ಮುಜುಂದಾರ್,ಸುಬ್ಬರಾವ್,ರಂಗರಾವ್ ಕುಲಕರ್ಣಿ,ಸಂತೋಷ್ ಕುಲಕರ್ಣಿ,ಆರ್.ಕೆ. ಕುಲಕರ್ಣಿ,ಶೇಷಗಿರಿ ಹುಣಸಗಿ,ಸಂಜೀವ ಮಹಿಪತಿ,ವಿಶ್ವನಾಥ ಕುಲಕರ್ಣಿ,ಶ್ರೀನಿವಾಸರಾವ್,ವೆಂಕಟರಾವ್,ಲಕ್ಷ್ಮಣ ರಾವ್ ದೇಶಪಾಂಡೆ, ಸತ್ಯಬೋಧ,ಗೋವಿಂದರಾವ್ ದೇಶಪಾಂಡೆ,ಪ್ರಸನ್ನ ಸಾಮ್ರಾಣಿ,ರಾಮಣ್ಣ, ಉಪಸ್ತಿತರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ