ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳಸ, ಹೊರನಾಡು ಕಡೆ ಹೋಗುವ ಜನರು ಗಮನಿಸಿ… ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಳಸ-ಹೊರನಾಡು ರಸ್ತೆಯಲ್ಲಿನ ಹೆಬ್ಬಾಳೆ ಸೇತುವೆಯ ತಡೆಗೋಡೆ ಮತ್ತು ಅಪ್ರೋಚ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಜನವರಿ 25 ರಿಂದ ಏಪ್ರಿಲ್ 24 ರವರೆಗೆ ಒಟ್ಟು ಮೂರು ತಿಂಗಳುಗಳ ಕಾಲ ಕಳಸ-ಹೊರನಾಡು ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿದೆ.
ಹೀಗಾಗಿ ಅತ್ತ ಪ್ರಯಾಣ ಹೊರಟವರು ಕಳಸ-ಹೊರನಾಡು ಸಂಪರ್ಕಿಸಲು ಬದಲಿ ರಸ್ತೆಯಾದ ಹಳುವಳ್ಳಿ-ದಾರಿಮನೆ ಕ್ರಾಸ್-ಹೊರನಾಡು ರಸ್ತೆಯು ಏಕಪಥದ ರಸ್ತೆಯಾಗಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಶೃಂಗೇರಿಯಿಂದ ಹೊರನಾಡಿಗೆ ಬರುವ ವಾಹನಗಳನ್ನು ಶೃಂಗೇರಿ-ಕೂಳೂರು-ಕೊಗ್ರೆ-ಶಾಂತಿಗ್ರಾಮ-ಬೈಲುಮನೆ-ಮೆಣಸಿನಹಾಡ್ಯ-ಬಲಿಗೆ-ಹೊರನಾಡಿಗೆ ವಾಹನ ಸಂಚರಿಸಲು ಬದಲಿ ಮಾರ್ಗವಾಗಿದೆ.
ಈ ರಸ್ತೆಯು ತೀವ್ರ ತಿರುವುಗಳಿಂದ ಕೂಡಿರುವುದರಿಂದ ಉದ್ದ ಚಾಸಿ ವಾಹನಗಳನ್ನು (ಬಸ್ಸು, ಲಾರಿ ಇತರೆ) (ಲಾಂಗ್ ಚಾಸ್ಸಿ) ಸಂಚಾರವನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಆದೇಶಿಸಿದ್ದಾರೆ.