CINE | ಇಂದು ತೆರೆಗೆ ಅಪ್ಪಳಿಸಿದೆ ಕಲ್ಕಿ 2898 ಎಡಿ, ಟಿಕೆಟ್‌ ದರ ನೋಡಿ ದಂಗಾದ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಭಾಸ್ ಸೇರಿದಂತೆ ಚಿತ್ರರಂಗದ ದಿಗ್ಗಜರು ಅಭಿನಯಿಸಿರುವ ಕಲ್ಕಿ 2898 ಎಡಿ ಮೂವಿ ಗ್ರ್ಯಾಂಡ್​ ಆಗಿ ವಿಶ್ವದ್ಯಾಂತ ಬೆಳ್ಳಿತೆರೆಗೆ ಅಪ್ಪಳಿಸಿದೆ. ಸದ್ಯ ಬೆಂಗಳೂರಿನಲ್ಲಿ ಕಲ್ಕಿಗೆ ಬಿಗ್ ವೆಲ್​ಕಾಮ್​ ಸಿಕ್ಕಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದಲೇ ಶೋ ಪ್ರದರ್ಶಿಸಲಾಗಿದ್ದು ಡಾರ್ಲಿಂಗ್​ ಫ್ಯಾನ್ಸ್​ ಫುಲ್ ಜೋಶ್​ನಲ್ಲಿದ್ದಾರೆ.

ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಮೂವಿ ಇದಾಗಿದ್ದು ಅಭಿಮಾನಿಗಳು ಕಾತುರದಿಂದ ಇದ್ದರು. ರಿಲೀಸ್‌ ಆಗಿರುವ ಸಿನಿಮಾಗೆ ನೆನ್ನೆಯೇ ಸಾಕಷ್ಟು ಮಂದಿ ಪ್ರೀ ಬುಕ್ಕಿಂಗ್‌ ಮಾಡಿಕೊಂಡಿದ್ದಾರೆ. ಇಂದು ಟಿಕೆಟ್‌ ಬುಕ್‌ ಮಾಡಿಕೊಂಡು ಸಿನಿಮಾಗೆ ಹೋಗೋಕೆ ನೋಡ್ತಿದ್ದ ಫ್ಯಾನ್ಸ್‌ ಟಿಕೆಟ್‌ ದರ ನೋಡಿ ಶಾಕ್‌ ಆಗಿದ್ದಾರೆ. ಸಿನಿಮಾ ಹವಾ ಇಳಿದ ಮೇಲೆ ನೋಡಿದ್ರಾಯ್ತು ಎಂದು ಅಂದುಕೊಂಡಿದ್ದಾರೆ.

ಐನಾಕ್ಸ್‌ ಹಾಗೂ ಪಿವಿಆರ್‌ ಶೋಗಳಲ್ಲಿ ಟಿಕೆಟ್‌ಗೆ 700,600 ಹಾಗೂ 800 ರೂಪಾಯಿ ದರ ನಿಗದಿಮಾಡಲಾಗಿದೆ. ಇನ್ನು ವೀಕೆಂಡ್‌ನಲ್ಲಿಯೂ ಇದೇ ದರ ಇರಲಿದ್ದು, ಸಿನಿಮಾ ಟೀಂಗೆ ಭರ್ಜರಿ ಲಾಭ ಆಗಲಿದೆ.

ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಕಲ್ಕಿ 2898 AD ಸಿನಿಮಾ ರಿಲೀಸ್ ಆಗಿದೆ. 2D, 3D ವರ್ಸನ್​ನಲ್ಲಿ ತೆರೆಗೆ ಅಪ್ಪಳಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಊರ್ವಶಿ ಚಿತ್ರಮಂದಿರದಲ್ಲಿ ಇಂದು ಬೆಳಗ್ಗೆ 6 ಗಂಟೆಗೆ ಮೊದಲ ಶೋವನ್ನು ಪ್ರದರ್ಶನ ಮಾಡಲಾಗಿದೆ. ಇನ್ನು ಕೆಲ ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 5 ಗಂಟೆಯಿಂದಲೇ ಸಿನಿಮಾ ಪ್ರದರ್ಶನ ಮಾಡಲಾಗಿದ್ದು ಮೂವಿ ನೋಡಿದ ಪ್ರಭಾಸ್ ಫ್ಯಾನ್ಸ್​ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!