ಸಾಮಾಗ್ರಿಗಳು
ಬೆಳ್ಳುಳ್ಳಿ
ಕಾಳುಮೆಣಸು
ಉಪ್ಪು
ಈರುಳ್ಳಿ
ಹಸಿಮೆಣಸು
ಚಿಕನ್
ಅರಿಶಿಣ ಪುಡಿ
ಎಣ್ಣೆ
ಮಾಡುವ ವಿಧಾನ
ಮೊದಲು ಚಿಕನ್ ಚೆನ್ನಾಗಿ ತೊಳೆದು ಅರಿಶಿಣ ಉಪ್ಪು ಹಾಕಿ
ನಂತರ ಕುಟಾಣಿಯಲ್ಲಿ ಕಾಳುಮೆಣಸು ಹಾಗೂ ಬೆಳ್ಳುಳ್ಳಿ ಕುಟ್ಟಿ
ಅದನ್ನು ಚಿಕನ್ ಮೇಲೆ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಮ್ಯಾರಿನೇಟ್ ಆದ ಚಿಕನ್ ಹಾಕಿ, ಸಣ್ಣ ಉರಿಯಲ್ಲಿ ಬೇಯಿಸಿ
ಮಧ್ಯ ಮಧ್ಯ ಸ್ವಲ್ಪ ನೀರು ಹಾಕಿ, ಮತ್ತೆ ಪೆಪ್ಪರ್ ಹಾಕುತ್ತಾ ಬೇಯಿಸಿ, ಕೊತ್ತಂಬರಿ ಸೊಪ್ಪು ಹಾಕಿದ್ರೆ ರೋಸ್ಟ್ ರೆಡಿ