ದೇಶದಲ್ಲಿ ‘ಕಲ್ಕಿ’ ಅಬ್ಬರ: ಮೂವಿ ಕುರಿತು ರಾಕಿಂಗ್ ಸ್ಟಾರ್ ಯಶ್‌ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದೇಶದಲ್ಲಿ ಈಗ ಕಲ್ಕಿ ಫಿವರ್. ಎಲ್ಲೆಲ್ಲೂ ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಸಿನಿ ಪ್ರೇಮಿಗಳು ಭರ್ಜರಿಯಾಗಿ ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ.

ಜೂನ್ 27ರಂದು ಬಿಡುಗಡೆಯಾದಚಿತ್ರಕ್ಕೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಮಾತ್ರವೇ ಅಲ್ಲದೆ ಸೆಲೆಬ್ರಿಟಿಗಳು ಸಹ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಖುಷಿ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕೂಡ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಿ ಸಿನಿಮಾ ಬಗ್ಗೆ ಮೆಚ್ಚಿ ತಮ್ಮ ಅಧಿಕೃತ ಖಾತೆಯಲ್ಲಿ ಅಪರೂಪಕ್ಕೆ ಟ್ಟೀಟ್​ ಮಾಡಿರುವ ಯಶ್​, ಕಣ್ಣಿಗೆ ಹಬ್ಬವಾಗುವ ರೀತಿ ಅದ್ಭುತ ದೃಶ್ಯಗಳನ್ನು ಕಟ್ಟಿಕೊಟ್ಟಿರುವ ‘ಕಲ್ಕಿ 2898 ಎಡಿ’ ಚಿತ್ರತಂಡಕ್ಕೆ ಶುಭಾಶಯಗಳು. ಈ ಸಿನಿಮಾವು ಹೆಚ್ಚು ಸೃಜನಶೀಲವಾಗಿ ಕತೆಗಳನ್ನು ಹೇಳಲು ದಾರಿ ತೋರಿಸಿಕೊಟ್ಟಿದೆ. ನಿರ್ದೇಶಕ ನಾಗ್ ಅಶ್ವಿನ್ ಮತ್ತು ನಿರ್ಮಾಣ ಸಂಸ್ಥೆ ವೈಜಯಂತಿ ಮೂವೀಸ್, ಸಿನಿಮಾ ಮಂದಿ ದೊಡ್ಡದಾಗಿ ಕನಸು ಕಂಡು ದೊಡ್ಡ ಹೆಜ್ಜೆಗಳನ್ನು ಇಡಲು ಧೈರ್ಯ ಕೊಟ್ಟಿದೆ’ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

https://x.com/TheNameIsYash/status/1806606356243451965?ref_src=twsrc%5Etfw%7Ctwcamp%5Etweetembed%7Ctwterm%5E1806606356243451965%7Ctwgr%5E36cbc22e1def39e7c6ee1a6b910896dbe3b74396%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fnews%3Fmode%3Dpwaaction%3Dclick

ಈ ಸಿನಿಮಾದ ‘ಡಾರ್ಲಿಂಗ್ ಪ್ರಭಾಸ್, ಅಮಿತಾಬ್ ಬಚ್ಚನ್ ಸರ್, ಕಮಲ್ ಹಾಸನ್ ಸರ್ ಮತ್ತು ದೀಪಿಕಾ ಪಡುಕೋಣೆ ಹಾಗೂ ಕೆಲವು ಸರ್ಪ್ರೈಸಿಂಗ್ ಕ್ಯಾಮಿಯೋ ಒಟ್ಟಿಗೆ ನೋಡುವುದು ಒಂದು ಅದ್ಭುತವಾದ ಅನುಭವ. ಇಂಥಹಾ ಒಂದು ಅದ್ಭುತವಾದ ಸಿನಿಮಾವನ್ನು ಪ್ರೇಕ್ಷಕರ ಎದುರು ತಂದ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು, ಈ ಸಿನಿಮಾ ನಿಜಕ್ಕೂ ಬೆಳ್ಳಿತೆರೆಯನ್ನು ಬೆಳಗಿಸುತ್ತಿದೆ’ ಎಂದಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!